Month: October 2026

ಗೌರಿ-ಗಣೇಶ ವಿಸರ್ಜನೆಗೂ ಮುನ್ನ ಕೆರೆಗೆ ಹಾರಿದ ವ್ಯಕ್ತಿ

ಹಾಸನ: ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಮದ್ಯದ ಅಮಲಿನಲ್ಲಿ ಕೆರೆಗೆ ಹಾರಿದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆಯಲ್ಲಿ ಕೆರೆಗೆ ಕೊಂಡೊಯ್ದು ವಿಸರ್ಜಿಸಲು ನೂರಾರು…

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಬಂದು ಕ್ರಿಯಾ ಯೋಜನೆ ಮಾಡಿದ್ರೆ ಒಪ್ಪಬೇಕಾ?

ಹಾಸನ:ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ವಿರುದ್ಧ ಶಾಸಕ ಎಚ್.ಪಿ. ಸ್ವರೂಪ್‌ಪ್ರಕಾಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯ ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದೆ, ಸಂಬಂಧಪಟ್ಟ ಅಧಿಕಾರಿಗಳು ಬಂದಿಲ್ಲ ಎಂಬ ಕಾರಣಕ್ಕೆ ಸಚಿವರು…

110 ವರ್ಷಗಳ ಸಾರ್ಥಕ ಜೀವನಕ್ಕೆ ಭೈರಮ್ಮ ವಿದಾಯ

ಹಳೇಬೀಡು: ಹಳೇಬೀಡಿನ ಹಿರಿಯ ಜೀವ, 110 ವರ್ಷಗಳ ಆರೋಗ್ಯವಂತ ಹಾಗೂ ಸಾರ್ಥಕ ಜೀವನ ನಡೆಸಿದ್ದ ಶತಾಯುಷಿ ಭೈರಮ್ಮ ಅವರು ಸೋಮವಾರ ನಿಧನರಾದರು. ಅವರ ನಿಧನದಿಂದ ಹಳೇಬೀಡು ಭಾಗದ ಜನರು ಹಿರಿಯ ಜೀವವೊಂದನ್ನು ಕಳೆದುಕೊಂಡಂತಾಗಿದೆ. ಸಿದ್ದಲಿಂಗ ಶೆಟ್ಟರ ವಂಶಸ್ಥರೆಂದು ಗುರುತಿಸಿಕೊಂಡಿದ್ದ ದೊಡ್ಡ ಕುಟುಂಬದ…

ಮುಂದಿನ ವರ್ಷದಿಂದ ಸರ್ಕಾರದ ಅನುದಾನದಲ್ಲೇ ಹಾಸನಾಂಬ ಉತ್ಸವ

ಹಾಸನ: ಹಾಸನಾಂಬ ದರ್ಶನೋತ್ಸವಕ್ಕೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಅನುದಾನ ನೀಡುವಂತೆ ಸರ್ಕಾರಿ ಆದೇಶ ಮಾಡಿಸುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಹಾಸನಾಂಬ-ಸಿದ್ದೇಶ್ವರ ದರ್ಶನೋತ್ಸವ ಹಿನ್ನಲೆಯಲ್ಲಿ ದೇಗುಲದ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಮುಂದಿನ ವರ್ಷದಿಂದ ದೇಗುಲ ಸಮಿತಿಗೆ ಬರುವ ಹಣ…

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಚಾವುಂಡರಾಯ ಪ್ರಶಸ್ತಿ

ಶ್ರವಣಬೆಳಗೊಳ: ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನಮಹಾಸಂಸ್ಥಾನ ಮಠದ ಸಂಚಾಲಿತ ಅಂಬಿಕಾ ವಿದ್ಯಾಲಯದ ಅತ್ಯಾಧುನಿಕ ನೂತನ ಕಟ್ಟಡವನ್ನು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ನೂತನ ಕಟ್ಟಡವನ್ನು ಉದ್ಘಾಟಿಸಿದರು,ಸಮಾರಂಭ ಗೊಮ್ಮಟನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು. ಮಾಜಿ…

ಸಕಲೇಶಪುರದಲ್ಲಿ ಸುಟ್ಟ ಸ್ಥಿತಿಯಲ್ಲಿ ನೂರಾರು ಆಧಾರ್, ಎಪಿಕ್ ಕಾರ್ಡ್ ಪತ್ತೆ

ಸಕಲೇಶಪುರ: ಪಟ್ಟಣದ ಶ್ರೀಗಂಧ ಹೋಟೆಲ್ ಸಮೀಪ ನೂರಾರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‌ಗಳನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಾಸನ, ರಾಮನಗರ, ಕೊಟ್ಟೂರು, ಬಳ್ಳಾರಿ, ವಿಜಯಪುರ, ಮೈಸೂರು ಸೇರಿದಂತೆ ವಿವಿಧ…

ಹಾಸನಾಂಬ ಮಹೋತ್ಸವಕ್ಕೆ ಎರಡು ವಿಶೇಷ ರೈಲುಗಳ ವ್ಯವಸ್ಥೆ

ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ.…

ಮಾಣಿಕ್ಯ ಸಂಭ್ರಮ ೨೦೨೬: ಅ. ೧೧ರಂದು ಹಾಸನದಲ್ಲಿ ಸಾಹಿತ್ಯ ಸಂಭ್ರಮ

ಹಾಸನ: ಕನ್ನಡ ಸಾಹಿತ್ಯ ಪರಂಪರೆಯನ್ನು ಮೆಲುಕು ಹಾಕುವ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಮಾಣಿಕ್ಯ ಪ್ರಕಾಶನದ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ಅ. ೧೧ರಂದು ನಗರದ ಸಂಸ್ಕೃತ ಭವನದಲ್ಲಿ ‘ಮಾಣಿಕ್ಯ ಸಂಭ್ರಮ ೨೦೨೬’ ಆಯೋಜಿಸಲಾಗಿದೆ ಎಂದು ಪ್ರಕಾಶನ ಸಂಸ್ಥಾಪಕ…

ಹೃದಯಾಘಾತದಿಂದ 27 ವರ್ಷದ ಯುವಕ ಸಾವು

ಹಾಸನ: ಹೃದಯಾಘಾತದಿಂದ 27 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಗರದ ವಿಜಯನಗರದಲ್ಲಿ ನಡೆದಿದೆ. ಮೃತನನ್ನು ಮೂಲತಃ ಕುದುರುಗುಂಡಿ ಗ್ರಾಮದ, ವಿಜಯನಗರ ನಿವಾಸಿ ನಂದನ್ ಎಂದು ಗುರುತಿಸಲಾಗಿದೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಂದನ್, ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದು, ಪತ್ನಿ ಹಾಗೂ…

ಹಬ್ಬಕ್ಕೆ ಮಾವನ ಮನೆಗೆ ಬಂದಿದ್ದ ಬಾಲಕ ವಿದ್ಯುತ್‌ ಶಾಕ್‌ಗೆ ಬಲಿ

ಅರಕಲಗೂಡು: ಹಬ್ಬದ ಹಿನ್ನೆಲೆಯಲ್ಲಿ ಮಾವನ ಮನೆಗೆ ಬಂದಿದ್ದ 12 ವರ್ಷದ ಬಾಲಕನೊಬ್ಬ ವಿದ್ಯುತ್‌ ಶಾಕ್‌ಗೆ ಒಳಗಾಗಿ ಮೃತಪಟ್ಟಿರುವ ದುರ್ಘಟನೆ ಅರಕಲಗೂಡು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಮೃತ ಬಾಲಕನನ್ನು ಕಟ್ಟಾಯ ಹೋಬಳಿಯ ಕಾರ್ಲೇ ಮುಕಂದೂರು ಗ್ರಾಮದ ಗಿರೀಶ್ ಅವರ ಪುತ್ರ…