filter: 0; fileterIntensity: 0.0; filterMask: 0; hdrForward: 0; highlight: false; sv:16.2.15.0.W30; module: photo;hw-remosaic: false;touch: (0.2940737, 0.7706251);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 42;

ಹಾಸನ: ಕನ್ನಡ ಸಾಹಿತ್ಯ ಪರಂಪರೆಯನ್ನು ಮೆಲುಕು ಹಾಕುವ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಮಾಣಿಕ್ಯ ಪ್ರಕಾಶನದ ೧೧ನೇ ವಾರ್ಷಿಕೋತ್ಸವದ ಅಂಗವಾಗಿ ಅ. ೧೧ರಂದು ನಗರದ ಸಂಸ್ಕೃತ ಭವನದಲ್ಲಿ ‘ಮಾಣಿಕ್ಯ ಸಂಭ್ರಮ ೨೦೨೬’ ಆಯೋಜಿಸಲಾಗಿದೆ ಎಂದು ಪ್ರಕಾಶನ ಸಂಸ್ಥಾಪಕ ಕೊಟ್ರೇಶ್ ಎಸ್. ಉಪ್ಪಾರ್ ಹೇಳಿದರು.

ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕಿ, ಹಿರಿಯ ಸಾಹಿತಿ ಡಾ. ಎಚ್.ಕೆ. ಹಸೀನಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ರಾಯಚೂರಿನ ಆದಿಕವಿಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಿವಾನಂದ ಕೆಳಗಿನಮನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

೨೮ ಕೃತಿಗಳಿಗೆ ದತ್ತಿ ಪುರಸ್ಕಾರ:
೨೦೨೬ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ೩೫೦ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದು, ಹಿರಿಯ ಸಾಹಿತಿಗಳ ತಂಡ ಎರಡು ತಿಂಗಳ ಕಾಲ ಮೌಲ್ಯಮಾಪನ ನಡೆಸಿ ೧೩ ದತ್ತಿ ಪ್ರಶಸ್ತಿಗಳಡಿ ೨೮ ಕೃತಿಗಳನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.
ಬೆಳಗಿನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೨ ಸಾಧಕರನ್ನು ಗೌರವಿಸಲಾಗುವುದು. ರಾಜ್ಯ ಮಟ್ಟದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಹಾಗೂ ಹೊಯ್ಸಳ ಸಾಹಿತ್ಯ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು ಎಂದರು.
ಐದು ಕೃತಿಗಳ ಲೋಕಾರ್ಪಣೆ:
ಮಧ್ಯಾಹ್ನ ಹಿರಿಯ ಸಾಹಿತಿ ಜಯಂತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ನಡೆಯಲಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಚೆನ್ನೈ ಹಾಗೂ ಮಹಾರಾಷ್ಟ್ರದಿಂದ ೧೫೦ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆಂದರು.
ಈ ವೇಳೆ ಐದು ಕೃತಿಗಳು ಲೋಕಾರ್ಪಣೆಯಾಗಲಿವೆ. ಮುಂಬಯಿಯ ಡಾ. ವಿಶ್ವೇಶ್ವರ ಮೇಟಿಯವರ ‘ಹಳ್ಳಿ ಎಂಬ ಬಳ್ಳಿ’, ಉತ್ತರ ಕನ್ನಡದ ಎಸ್.ಜಿ. ಕಡೇಮನಿಯವರ ‘ಸಾಲು ಹಣತೆಗಳು’, ಭಾರತಿ ಕೆ. ನಲವಡೆಯವರ ‘ಭಾವಸೆಲೆ’, ಹಾಸನದ ಗಿರಿಜಾ ನಿರ್ವಾಣಿಯವರ ‘ಕರಿಮುಗಿಲು’ ಹಾಗೂ ಎಚ್.ಜಿ. ನೀಲಮ್ಮ ಸಂಪಾದಿಸಿರುವ ‘ಬದುಕು ಹಾಡಿದ ಹಾಡು’ ಕೃತಿಗಳು ಬಿಡುಗಡೆಯಾಗಲಿವೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ರಾಜ್ಯ ಮತ್ತು ಹೊರರಾಜ್ಯಗಳ ಸಾಹಿತಿಗಳು ಭಾಗವಹಿಸಲಿದ್ದಾರೆ.
ಕಸಾಪ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು, ಗಣೇಶ್ ತಮ್ಲಾಪುರ, ಬಿ.ಎಂ. ವರದರಾಜು, ಭಾನುಮತಿ, ಕೆ.ಸಿ.ಗಿತಾ, ಕೆ.ಟಿ.ಜಯಶ್ರೀ ಹಾಜರಿದ್ದರು.

Leave a Reply

Your email address will not be published. Required fields are marked *