ಹಾಸನ: ಅಧಿದೇವತೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು ಮಂಗಳ ವಾದ್ಯಗಳ ನಾದದ ನಡುವೆ ಪೂಜಾ ಸಾಮಗ್ರಿಗಳನ್ನು ಹೊತ್ತೊಯ್ದ ಅರ್ಚಕರ ತಂಡ ದೇವಾಲಯ ತಲುಪಿದೆ.
ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ಅರ್ಚಕರು ದೇವಾಲಯ ಪ್ರವೇಶಿಸಿದ್ದು,
ಗರ್ಭಗುಡಿ ಬಾಗಿಲು ತೆರೆಯುವ ಮೊದಲು ಬಾಗಿಲಿಗೆ ವಿಶೇಷ ಪೂಜೆ ನಡೆಯಲಿದೆ.
ಗರ್ಭಗುಡಿ ತೆರೆಯುವ ಬಳಿಕ ದೇವಿಯ ಆಲಯದ ಒಳಗಡೆ ಪೂಜೆ ಕಾರ್ಯ ಆರಂಭವಾಗಲಿದೆ.
ಎರಡು ಕಡೆಯ ಪೂಜೆಗೆ ಅಗತ್ಯವಾದ ಪೂಜಾ ಸಾಮಗ್ರಿ, ದೇವಿಯ ಅಲಂಕಾರ ಒಡವೆಗಳು, ಹೂವು-ತಾಂಬೂಲ ಮೊದಲಾದವುಗಳೊಂದಿಗೆ ತಂಡ ಆಗಮಿಸಿದೆ.
ಮುತ್ತೈದೆಯರು ಸಹ ಪೂಜಾ ಸಾಮಗ್ರಿಗಳೊಂದಿಗೆ ದೇವಾಲಯ ಪ್ರವೇಶಿಸಿ ಸಂಪ್ರದಾಯದ ಪೂಜೆ ವಿಧಿಗಳನ್ನು ಮುಂದುವರಿಸಿದ್ದಾರೆ.
