ಹಾಸನ: ಪಾನಮತ್ತನಾಗಿ ಮಲಗಿದ್ದ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಿನ್ನಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಿಯೋಜನೆ ಮೇರೆಗೆ ಮಹಾನಗರ ಪಾಲಿಕೆಯಲ್ಲಿ ಹೆಲ್ತ್‌ಇನ್‌್ಸಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸಾದ್ ಅವರು, ಸರ್ಕಾರಿ ವಾಹನ ಬಳಸಿಕೊಂಡು ಮದ್ಯ ಸೇವನೆ ಮಾಡಿ ಮಲಗಿದ್ದ ವಿಡಿಯೋ ಸುದ್ದಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿತ್ತು. ಈ ಹಿನ್ನಲೆ ಕರ್ತವ್ಯ ಲೋಪವಾಗಿರುವುದು ಕಂಡುಬಂದ ಹಿನ್ನಲೆ ಡಿಹೆಚ್‌ಒ ಆಮಾನತುಗೊಳಿದಿ ಆದೇಶ ಹೊರಡಿಸಿದ್ದಾರೆ.
