ಅರಕಲಗೂಡು: ಮಾಜಿ ಶಾಸಕ, ಪರಿಸರಕ್ಕಾಗಿ ನಾವು ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎ.ಟಿ.ರಾಮಸ್ವಾಮಿ ಅವರ ಅಭಿನಂದನಾ ಗ್ರಂಥ ಹೊರತರಲು ಮೈಸೂರಿನ ಎ.ಟಿ.ರಾಮಸ್ವಾಮಿ ಅಭಿನಂದನಾ ಗ್ರಂಥ ಸಮಿತಿ ನಿರ್ಧರಿಸಿದ್ದು, ಆ ಬಗ್ಗೆ ಚರ್ಚಿಸಲು ಜ. ೧೦ರ ಶನಿವಾರ ಬೆಳಿಗ್ಗೆ ೧೧ ಗಂಟೆಗೆ ತಾಲ್ಲೂಕಿನ ಮುದ್ದನಹಳ್ಳಿಯ ಅರಸೀಕಟ್ಟೆ ಅಮ್ಮ ದೇವಾಲಯ ಆವರಣದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಸಂಘದ ರಾಜ್ಯಾಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಡಾ.ಎ. ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಕೆ.ಬಸವರಾಜು, ವಕೀಲ ಜನಾರ್ದನ ಗುಪ್ತ, ಡಾ.ಬಿ.ಈ.ಯೋಗೇಂದ್ರ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಕೋರಿದೆ. ಜೊತೆಗೆ ಎ.ಟಿ.ರಾಮಸ್ವಾಮಿ ಅವರ ಕುರಿತು ಬರಹಗಳನ್ನು dr.arangaswamy@gmail.com ಇಲ್ಲಿಗೆ ಕಳುಹಿಸಲು ಕೋರಿದೆ.

Leave a Reply

Your email address will not be published. Required fields are marked *