ಹಾಸನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗನೇ ತಂದೆಯನ್ನು ಕಬ್ಬಿಣದ ರಾಡ್ ನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆಯಲ್ಲಿ ನಡೆದಿದೆ.
ಹಿರೀಸಾವೆ ಕೆರೆ ಬೀದಿ ನಿವಾಸಿ ಸತೀಶ್ ಮೃತ ದುರ್ದೈವಿ. ಪುತ್ರ ರಂಜಿತ್ ಕೊಲೆ ಆರೋಪಿ. ಸತೀಶ್ ಹಾಗೂ ಪತ್ನಿ ನಿರ್ಮಲ ನಡುವೆ ವೈಮನಸ್ಸಿನಿಂದ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು. ಸತೀಶ್ ಅವರು ತಾಯಿ ಪುಟ್ಟಮ್ಮ ಜೊತೆಗೆ ಹಿರೀಸಾವೆ ಮನೆಯಲ್ಲಿ ವಾಸವಿದ್ದರು.
ಶನಿವಾರ ಸಂಜೆ ಮನೆಗೆ ಬಂದ ರಂಜಿತ್ ತಂದೆಯೊಂದಿಗೆ ಜಗಳ ಮಾಡಿದ್ದು ಆಕ್ರೋಶದಲ್ಲಿ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
