ಹಾಸನ: ದಿಢೀರ್ ಕಿಡ್ನಿ ವೈಫಲ್ಯದಿಂದ ತಮ್ಮ ಮಗನ ಆರೋಗ್ಯದಲ್ಲಿ ಏರುಪೇರಾಗಿದ್ದು ಶಸ್ತ್ರ ಚಿಕಿತ್ಸೆಗಾಗಿ ದಾನಿಗಳು ಹಣಕಾಸು ನೆರವು ನೀಡಬೇಕೆಂದು ಆಲೂರು ತಾಲ್ಲೂಕು
ರಾಯರಕೊಪ್ಪಲು ಗ್ರಾಮದ ಜ್ಯೋತಿ ಕೋರಿದರು.
ಸುದ್ದಿಗೋಷ್ಟಿಯಲ್ಲಿ ಸೋಮವಾರ ಮಾತನಾಡಿ, 27 ವರ್ಷದ ಪುತ್ರ ವಿಶ್ವಾಸ್ ಆರೋಗ್ಯದಲ್ಲಿ ವ್ಯತ್ಯಯವುಂಟಾಗಿದೆ. ನಮಗೆ ಜಮೀನು ಸೇರಿ ಯಾವುದೇ ಆಸ್ತಿಯಿಲ್ಲ. ರಸ್ತೆಬದಿ ಹೋಟೆಲ್ ಇಟ್ಟುಕೊಂಡಿದ್ದೇವೆ ಎಂದರು.
ಕಳೆದ ಒಂದು ತಿಂಗಳಿಂದ ವಿಶ್ವಾಸ್ ಗೆ ಕೆಮ್ಮು ಕಾಣಿಸಿಕೊಂಡಿತು. ವೈದ್ಯರ ಬಳಿ ತೋರಿಸಿದಾಗ ಒಂದು ಕಿಡ್ನಿ ಹುಟ್ಟಿನಿಂದಲೇ ನಿಷ್ಕ್ರಿಯವಾಗಿದ್ದು, ಉಳಿದ ಒಂದು ಕಿಡ್ನಿ ನೆರವಿನಿಂದ ಬದುಕುತ್ತಿದ್ದಾನೆಂದರು.
ನಿತ್ಯ ಡಯಾಲಿಸಿಸ್ ಮಾಡಿಸುತ್ತಿದ್ದು, ಎರಡು ಲಕ್ಷ ರೂ. ಖರ್ಚಾಗಿದೆ. ಶಸ್ತ್ರಚಿಕಿತ್ಸೆಗೆ 15 ರಿಂದ 20 ಲಕ್ಷ ರೂ. ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ದಾನಿಗಳು ಆರ್ಥಿಕ ಸಹಾಯ ಮಾಡಬೇಕೆಂದು ಕೋರಿದರು.
ಸಹಾಯ ಮಾಡಲು ಇಚ್ಛಿಸುವವರು ಮೊ.ಸಂ. 9100794372 ಇಲ್ಲಿಗೆ ಸಂಪರ್ಕಿಸಬಹುದು.
filter: 0; fileterIntensity: 0.0; filterMask: 0; hdrForward: 0; highlight: true; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35; 