ಅರಸೀಕೆರೆ: ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಜ. 24 ಹಾಗು 25 ರಂದು ಕರಿಯಮ್ಮ ದೇವಿ ಕಪ್ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.
ಪ್ರಥಮ ಬಹುಮಾನ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ., ತೃತೀಯ 15 ಸಾವಿರ ರೂ., ನಾಲ್ಕನೇ ಬಹುಮಾನ 10 ಸಾವಿರ ರೂ. ಮತ್ತು ಐದನೇ ಬಹುಮಾನ 8 ಸಾವಿರ ರೂ. ನೀಡಲಾಗುವುದು. ಪ್ರವೇಶ ಶುಲ್ಕ 999 ರೂ. ನಿಗದಿಪಡಿಸಿದ್ದು ಆಸಕ್ತ ಕ್ರೀಡಾಪಟುಗಳು ಮೊ.ನಂ. 9741506723 ಇಲ್ಲಿಗೆ ಕರೆ ಮಾಡಿ ಹೆಸರು ನೋಂದಾಯಿಸಬಹುದು.
ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಹೆಚ್.ಕೆ.ಸುರೇಶ್, ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ವಿಶೇಷ ನಿವೃತ್ತ ಜಿಲ್ಲಾಧಿಕಾರಿ ಕವಿತಾ ಬಿ.ನಾಗರಾಜ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
