ಹಾಸನ: ಪುರಸಭೆ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಎ.ಆರ್‌.ಅಶೋಕ್‌ ಅವರ ಸದಸ್ಯತ್ವ ಅನರ್ಹಗೊಂಡಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಕಾಂಗ್ರೆಸ್‌‍ ಸದಸ್ಯತ್ವ ರದ್ದುಗೊಳಿಸುವಂತೆ ನ್ಯಾಯಾಲಯ ಮೆಟ್ಟಿಲೇರಿತ್ತು. ಕಾಂಗ್ರೆಸ್‌‍ನಿಂದ ಚುನಾಯಿತರಾಗಿದ್ದ ಅಶೋಕ್‌ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಹಿಂದೇಟು ಹಾಕಿದ್ದ ಹಿನ್ನಲೆಯಲ್ಲಿ ಸ್ವಪಕ್ಷಿಯರೇ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿ ಪಕ್ಷದಿಂದ ವಿಪ್‌ ಜಾರಿ ಮಾಡಲಾಗಿತ್ತು. ಅಶೋಕ್‌ ಅವರು ವಿಪ್‌ ಉಲ್ಲಂಘಿಸಿದ್ದರಿಂದ ಸದಸ್ಯತ್ವ ರದ್ದುಪಡಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳದೆ ವಿಪ್‌ ಉಲ್ಲಂಘನೆ ದೃಢಪಟ್ಟ ಹಿನ್ನಲೆ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987 ಕಲಂ 3, 3(1)(ಬಿ), 4(1)(ಎ) ಮತ್ತು 4(1)(ಬಿ)ರ ಅನುಸಾರ ಸದಸ್ಯತ್ವ ರದ್ದುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *