ಹಾಸನ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಬಿ.ಆರ್. ಪೂರ್ಣಿಮಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಅವರ ಸ್ಥಾನಕ್ಕೆ 2022ರ ಐಎಎಸ್ ಬ್ಯಾಚ್‌ನ ಅಧಿಕಾರಿ ಶುಭಂ ಶುಕ್ಲ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶುಭಂ ಶುಕ್ಲ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಶುಭನ್ವಿತಾ ಅವರ ಪತಿಯಾಗಿದ್ದಾರೆ.
ಶುಭಂ ಶುಕ್ಲ ಅವರನ್ನು ವಿವಾಹವಾದ ನಂತರ, ಶುಭಾನ್ವಿತಾ ಅವರು ತಮ್ಮ ಐಪಿಎಸ್ ಕೇಡರ್ ಬದಲಾವಣೆ ಮಾಡಿಸಿಕೊಂಡಿದ್ದರು.
