ಹಾಸನ: ಅರಸೀಕೆರೆ ತಾಲ್ಲೂಕಿನ ಬೇವಿನ ಮರದ ಕೂಡು ಬಳಿ ಗುರುವಾರ ರಾತ್ರಿ ಕಾರು ಚಾಲಕನೊಬ್ಬ ಬೈಕ್‌ಗೆ ಡಿಕ್ಕಿ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಅರಸೀಕೆರೆ ತಾಲ್ಲೂಕಿನ ಮಂಜೇನಹಳ್ಳಿ ಗ್ರಾಮದ ಪ್ರಶಾಂತ್‌ ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇನಹಳ್ಳಿಯ ತೋಟದ ಮನೆಯಿಂದ ಗಂಡಸಿ ಹ್ಯಾಂಡ್‌ ಪೋಸ್ಟ್‌ಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ13ಝೆಡ್‌6126 ನಂಬರ್‌ನ ಕಾರು ಚಾಲಕ ಡಿಕ್ಕಿ ಮಾಡಿ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಪ್ರಶಾಂತ್‌ ಅವರ ಒಂದು ಕಾಲು ಮುರಿದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಕೆಲವು ಹೊತ್ತಿನ ಬಳಿಕ ಸಾರ್ವಜನಿಕರು ಆ್ಯಂಬುಲೆನ್‌್ಸ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಡಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *