Author: Mallikarjun

ಅರಕಲಗೂಡು ದಸರಾ ಮಹೋತ್ಸವಕ್ಕೆ ದೀಪಾ ಭಾಸ್ತಿಗೆ ಆಹ್ವಾನ

ಹಾಸನ: ಅರಕಲಗೂಡು ದಸರಾ ಮಹೋತ್ಸವಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ದೀಪಾ ಭಾಸ್ತಿ ಅವರಿಗೆ ಶಾಸಕ ಎ.ಮಂಜು ಆಹ್ವಾನಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿಯ ನೂತನ ಬಡಾವಣೆಯಲ್ಲಿರುವ ಅವರ ನಿವಾಸದಲ್ಲಿ ದೀಪಾ ಭಾಸ್ತಿ ಅವರನ್ನು ಸ್ವತಃ ಭೇಟಿಯಾಗಿ ಆಹ್ವಾನಿಸಿದರು. ಬಾನು ಮುಷ್ತಾಕ್…

ಹಾಸನ ರೆಡ್ ಕ್ರಾಸ್ ಕಾರ್ಯ ರಾಜ್ಯಕ್ಕೆ ಮಾದರಿ: ಡಿಸಿ ಕೆ.ಎಸ್. ಲತಾಕುಮಾರಿ ಬಣ್ಣನೆ

ಹಾಸನ: ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಹಾಸನ ರೆಡ್ ಕ್ರಾಸ್ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು. ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಹಾಸನ…

ಚಿತ್ರಕಲಾ ಶಿಕ್ಷಕ ಬಿ.ಎಸ್. ದೇಸಾಯಿ ಅವರ ಸೊಸೆ ಅಪಘಾತದಲ್ಲಿ ನಿಧನ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಆರ್ಟಿಸ್ಟ್ ಶಶಿಕಿರಣ ದೇಸಾಯಿ ಅವರ ಪತ್ನಿ ಕಲ್ಪನಾ ನಗರದ ನಂದಿನಿ ಲೇಔಟ್ ನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಸನದ ಚಿತ್ಕಲಾ ಫೌಂಡೇಶನ್ ಅಧ್ಯಕ್ಷ, ಚಿತ್ರಕಲಾವಿದ ಬಿ.ಎಸ್. ದೇಸಾಯಿ ಅವರ ಸೊಸೆ ಕಲ್ಪನಾ ಮಗಳು ಡಿಂಪನಾ (4)ಸೇರಿದಂತೆ…

ಬೇಲೂರಿನಲ್ಲಿ ಗಣೇಶ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು

ಬೇಲೂರು: ದೇವಾಲಯದ ಕಬ್ಬಿಣದ ಬಾಗಿಲು ತೆರೆದು ಕಲ್ಲಿನ ಗಣೇಶ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಸಾರಿಗೆ ಬಸ್ ನಿಲ್ದಾಣ ಮುಂಭಾಗದ ಬೇಲೂರು ಪುರಸಭೆ ಆವರಣದಲ್ಲಿರುವ ಶ್ರೀ ವಿದ್ಯಾಗಣಪತಿ ದೇವಾಲಯದಲ್ಲಿ ಪ್ರತಿನಿತ್ಯ ಪೂಜೆ ಕೈಂಕರ್ಯಗಳು ನಡೆಯುತ್ತದೆ. ಪ್ರತಿನಿತ್ಯ…

ಚೈತ್ರಾ ನಾಯಕರಹಳ್ಳಿ ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವುದರ ಜೊತೆಗೆ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿ

ಹಾಸನ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಚೈತ್ರಾ ನಾಯಕರಹಳ್ಳಿ ಅವರು ಶಿಕ್ಷಕರ ಆಶೋತ್ತರಗಳಿಗೆ ಸ್ಪಂದಿಸುವ ಜೊತೆಗೆ ಮಕ್ಕಳ ಕಲಿಕೆಗೆ ಆದ್ಯತೆ ನೀಡಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ‌ ಉಪನಿರ್ದೇಶಕ ಕೆ.ಎನ್. ಬಲರಾಮ್ ಸಲಹೆ ನೀಡಿದರು. ರಾಜ್ಯ ಪ್ರಾಥಮಿಕ ಶಾಲಾ…

ಪದವಿ ವಿದ್ಯಾರ್ಥಿ ಬಲಿ ಪಡೆದ ಸೋಷಿಯಲ್ ಮಿಡಿಯಾ ಹಾವಳಿ

ಹಾಸನ: ನಗರದ ಮಹಾರಾಜ ಪಾರ್ಕ್‌ನಲ್ಲಿ ಕಾಲೇಜು ಸ್ನೇಹಿತೆಯರೊಂದಿಗೆ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದರಿಂದ ಮನನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಗುರುವಾರ ನಡೆದಿದೆ. ತಾಲ್ಲೂಕಿನ ಮೊಸಳೆಹೊಸಳ್ಳಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಅಂತಿಮ…

ಎಂಸಿಇ ಕಾಲೇಜು ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂಸಿಇ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ದರ್ಶನ್ (24) ಎಂಬ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಅಂತಿಮ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ದರ್ಶನ್, ಹಾಸನಾಂಬ ಬ್ಲಾಕ್‌ನ ರೂಂ ನಂ.…

ಗಣೇಶೋತ್ಸವ ಮೆರವಣಿಗೆ: ಡಿಜೆ ಆಫ್ ಮಾಡಿಸಿದ್ದಕ್ಕೆ ಶಾಸಕ ಹೆಚ್.ಪಿ.‌ಸ್ವರೂಪ್ ಆಕ್ರೋಶ

ಹಾಸನ: ಇಲ್ಲಿನ ಹೇಮಾವತಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ 20 ಅಡಿ ಎತ್ತರದ ಮಹಾರಾಜ್ ಗಣೇಶನ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ವಿಚಾರವಾಗಿ ಶಾಸಕ ಹೆಚ್.ಪಿ. ಸ್ವರೂಪ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಸಂಜೆ ನಗರದ ಪ್ರಮುಖ ವೃತ್ತಗಳಲ್ಲಿ ಸಾಗುತ್ತಿದ್ದ ಮೆರವಣಿಗೆಯ ವೇಳೆ…

ಹಾಸನ: ಇನ್ನೂ ತೆರೆಯದ ಎಂಸಿಇ ಅಧ್ಯಕ್ಷರ ಕೊಠಡಿ

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ರಾಗಿ ಬಿ.ಆರ್. ಗುರುದೇವ್ ಆಯ್ಕೆಯಾಗಿದ್ದರೂ ಅವರಿಗೆ ಕುರ್ಚಿ ಅಲಂಕರಿಸುವ ಭಾಗ್ಯ ಇನ್ನೂ ಸಿಕ್ಕಿಲ್ಲ. ಸಹಕಾರ ಸಂಘಗಳ ಉಪನಿಬಂಧಕರ ಆದೇಶದ ಹಿನ್ನೆಲೆಯಲ್ಲಿ ನಿನ್ನೆ ಅಶೋಕ್ ಹಾರನಹಳ್ಳಿ ಬಣದ ನಿರ್ದೇಶಕರು ಸಂಭ್ರಮಿಸಿದ್ದರು. ಆದರೆ ಆರ್.ಟಿ.…

ಬೆಂಗಳೂರು-ಮಂಗಳೂರು ಹಗಲು ರೈಲು ಸಂಚಾರ ನ. 1ಕ್ಕೂ ಪುನಾರಂಭವಾಗದು

ಹಾಸನ: ಬೆಂಗಳೂರು-ಮಂಗಳೂರು ನಡುವಿನ ಅತ್ಯಂತ ಜನಪ್ರಿಯ ಹಗಲು ರೈಲು ಸಂಚಾರ, ಪಶ್ಚಿಮ ಘಟ್ಟಗಳ ಮಂಜು ಹೊದ್ದ ಬೆಟ್ಟಗುಡ್ಡಗಳ ದೃಶ್ಯಗಳನ್ನು ಆನಂದಿಸುವ ಪ್ರಯಾಣಿಕರಿಗೆ, ಕರಾವಳಿ ಸಂಪರ್ಕಕ್ಕೆ ಸುಲಭ ಮಾರ್ಗವಾಗಿದ್ದ ಈ ಸೇವೆಯ ಪುನಾರಂಭ ಇನ್ನೂ ಮುಂದೂಡಿಕೆಯಾಗುವ ಸಾಧ್ಯತೆ ಕಾಣಿಸುತ್ತಿದೆ. ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್)ಯ…