ಹಾಸನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂಬರುವ ಚುನಾವಣಾ ಉದ್ದೇಶದಿಂದ ಪಕ್ಷ ಸಂಘಟನೆಗೆ ಸೂಚಿಸಿದ್ದಾರೆ. ವಿಧಾನಸಭಾವಾರು ಮುಖಂಡರ ಸಭೆ ನಡೆಸಲು ಸೂಚಿಸಿದ್ದಾರೆ. ಆ ರೀತಿ ಪ್ರೀತಂ ಗೌಡ ಕೆಲಸ ಮಾಡಿದ್ದಾರೆ. ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪ್ರೀತಂ ಗೌಡ ಹೇಳಿದ್ದಾರೆ. ಮೈತ್ರಿ ಬೇಡ ಎನ್ನುವುದು ಎಲ್ಲರ ಅಪೇಕ್ಷೆಯಾಗಿದೆ. ಪ್ರೀತಂ ಗೌಡರೇ ಮೈತ್ರಿಗೆ ಅಡ್ಡಿಪಡಿಸಿದ್ದಾರೆ ಎಂದು ಹೇಳುವುದು ತಪ್ಪು. ಲೋಕಸಭೆ ಚುನಾವಣೆಯಲ್ಲಿ ಪ್ರೀತಂ ಮಾಜಿ ಶಾಸಕರಾಗಿದ್ದರು. ಆ ಸಂದರ್ಭದಲ್ಲಿ ಅವರ ಪಾತ್ರ ಏನೂ ಇರಲಿಲ್ಲ. ಹೊಳೆನರಸೀಪುರದಲ್ಲಿ 17 ಸಾವಿರ ಲೀಡ್ ಕಾಂಗ್ರೆಸ್ ಗೆ ಬಂತು, ಹಾಸನದಲ್ಲಿ 20 ಸಾವಿರ ಲೀಡ್, ಅರಕಲಗೂಡು ಕ್ಷೇತ್ರದಲ್ಲಿ 19 ಸಾವಿರ ಲೀಡ್ ಕೊಟ್ಟಿದ್ದಾರೆ. ಹಾಗಾದರೆ ಜೆಡಿಎಸ್ ಶಾಸಕರೇ ಮೈತ್ರಿ ಎಂಪಿ ಅಭ್ಯರ್ಥಿಯನ್ನು ಸೋಲಿಸಿದರಾ. ಪ್ರೀತಂ ಗೌಡ ಶಕ್ತಿಶಾಲಿ ಎಂಬುದನ್ನು ನೀವೆ ಒಪ್ಪಿಕೊಂಡಿದ್ದಿರಿ ಎಂದರು.
ಬಿಜೆಪಿ ನಗರಾಧ್ಯಕ್ಷ ಯೊಗೇಶ್, ನಗರಸಭೆ ಮಾಜಿ ಅಧ್ಯಕ್ಷ ಮೋಹನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಲಕ್ಷ್ಮೀಶ್, ಹುಡಾ ಮಾಜಿ ಅಧ್ಯಕ್ಷ ಲಲಾಟಮೂರ್ತಿ ಹಾಜರಿದ್ದರು.
filter: 0; fileterIntensity: 0.0; filterMask: 0; hdrForward: 0; highlight: true; brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 37; 