ಚನ್ನರಾಯಪಟ್ಟಣ: ಮನೆಯವರ ವಿರೋಧದ ನಡುವೆ ಮದುವೆಯಾದ ನವ ಜೋಡಿಗಳು ಬೈಕ್‌ನ ಮುಂಭಾಗದ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 5 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಅಲ್ಲೇ ಬಿಟ್ಟಿದ್ದರ ಪರಿಣಾಮ ಕಳುವಾಗಿರುವ ಘಟನೆ ತಾಲ್ಲೂಕಿನ ರೇಚಿಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿ ಹುಣಸೆಘಟ್ಟ ಗ್ರಾಮದ ಕೌಶಿಕ್‌ ಅವರ ಪತ್ನಿ ನಾಗಶ್ರೀ ಅವರಿಗೆ ಸೇರಿದ ಚಿನ್ನಾಭರಣ ಕಳುವಾಗಿದೆ. ಇಬ್ಬರು ಪರಸ್ಪರ ಪ್ರೀತಿಸಿ ಜ. 16ರಂದು ವಿವಾಹವಾಗಿದ್ದರು. ಈ ಸಂಬಂಧಕ್ಕೆ ಪೋಷಕರು ವಿರೋಧಿಸಿದ್ದರಿಂದ ಮದುವೆಯಾದ ದಿನ ಬಾಗೂರು ಹೋಬಳಿ ರೇಚಿಹಳ್ಳಿ ಗ್ರಾಮದ ಸ್ನೇಹಿತರ ಮನೆಯಲ್ಲಿ ವಾಸವಿದ್ದರು. ಮಾರನೇ ದಿನ ಹುಣಸೆಘಟ್ಟಕ್ಕೆ ಹೋಗಿ ಅದೇ ದಿನ ವಾಪಾಸ್ಸಾಗಿದ್ದರು. ಆದರೆ, ನಾಗಶ್ರೀ ಅವರ ತಮ ಮೈಮೇಲಿನ ಒಡವೆಗಳನ್ನು ಬೈಕ್‌ ಮುಂಭಾಗದ ಬ್ಯಾಗ್‌ನಲ್ಲಿಟ್ಟಿದ್ದರು. ಮನೆಯೊಳಗೆ ಹೋಗುವಾಗ ಆ ವಿಚಾರವನ್ನು ಮರೆತಿದ್ದು ಬೆಳಿಗ್ಗೆ ಎದ್ದು ನೋಡಿದಾಗ ಚಿನ್ನಾಭರಣವಿದ್ದ ಬ್ಯಾಗ್‌ ನಾಪತ್ತೆಯಾಗಿದೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *