ಬೆಂಗಳೂರು: ಪೊಲೀಸ್‌‍ ಇಲಾಖೆಯಲ್ಲಿ ಅಸಾಧಾರಣ ಸೇವೆ ಮತ್ತು ದಕ್ಷತೆ ಮೆರೆದ 153 ಪೊಲೀಸ್‌‍ ಅಧಿಕಾರಿ ಹಾಗು ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪ್ರಕಟವಾಗಿದ್ದು ಹಾಸನದ ಹೆಚ್ಚುವರಿ ಪೊಲೀಸ್‌‍ ವರಿಷ್ಟಾಧಿಕಾರಿ ಎಂ.ಕೆ.ತಮಯ್ಯ ಭಾಜನರಾಗಿದ್ದಾರೆ.
ಏ. 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪದಕ ಪ್ರದಾನ ಮಾಡಲಾಗುವುದು. ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಐಪಿಎಸ್‌‍ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಪೊಲೀಸ್‌‍ ವರಿಷ್ಟಾಧಿಕಾರಿ ಡಾ. ಸುಮನ್‌ ಡಿ. ಪನ್ನೇಕರ್‌, ಉಡುಪಿಯ ಡಾ. ಕೆ. ಅರುಣ್‌, ಯಾದಗಿರಿಯ ಪೃಥ್ವಿಕ್‌ ಶಂಕರ್‌, ಬೆಂಗಳೂರು ಡಿಸಿಪಿ (ಸಂಚಾರ ದಕ್ಷಿಣ) ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನದ ಹೆಚ್ಚುವರಿ ಪೊಲೀಸ್‌‍ ವರಿಷ್ಟಾಧಿಕಾರಿ ಎಂ.ಕೆ. ತಮಯ್ಯ, ಶಿವಮೊಗ್ಗಾ ಎಎಸ್‌‍ಪಿ-2 ಎಸ್‌‍. ರಮೇಶ್‌ ಕುಮಾರ್‌ ಅಲ್ಲದೆ 12 ಡಿವೈಎಸ್‌‍ಪಿಗಳು ಹಾಗು ವಿವಿಧ ಹಂತದ ಸಿಬ್ಬಂದಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪದಕ ವಿಜೇತರು ನಿಗದಿತ ಸಮವಸ್ತ್ರ ಧರಿಸಿ ಸಮಾರಂಭಕ್ಕೆ ಹಾಜರಾಗುವಂತೆ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *