ಹಾಸನ: ಸೆರೆಸಿಕ್ಕು ಪರಾರಿಯಾಗಿದ್ದ ಒಂಟಿಕೋರೆಯ ಪುಂಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ.
ಮೂರನೇ ದಿನದ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಹಾಗು ಇಟಿಎಫ್ ಸಿಬ್ಬಂದಿ, ಕಾಡಾನೆ ಇರುವ ನಿಖರ ಸ್ಥಳವನ್ನು ಪತ್ತೆ ಹಚ್ಚಿದರು. ದೈತ್ಯಾಕಾರದ ಕಾಡಾನೆ ಜೊತೆಗೆ ಇನ್ನೊಂದು “ಕ್ಯಾಪ್ಟನ್” ಕಾಡಾನೆ ಕೂಡ ಇರುವುದರಿಂದ ಕಾರ್ಯಾಚರಣೆ ಸವಾಲಿನದ್ದಾಗಿತ್ತು.
ಕುಮ್ಕಿ ಆನೆಗಳ ನೆರವಿನಿಂದ ಕಾರ್ಯಾಚರಣೆಗೆ ಮುಂದಾದ ತಂಡ, ವೈದ್ಯರ ಸಹಾಯದಿಂದ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿತು. ಇಂಜೆಕ್ಷನ್ ನೀಡುತ್ತಿದ್ದಂತೆ, ಒಂಟಿಕೋರೆ ಕಾಡಾನೆ ಮತ್ತು ಅದರ ಜೊತೆಯಲ್ಲಿದ್ದ ಕ್ಯಾಪ್ಟನ್ ಕಾಡಾನೆ ಓಡಲು ಆರಂಭಿಸಿದವು. ಬಳಿಕ ಪುಂಡಾನೆಯನ್ನು ಸೆರೆಹಿಡಿಯಲಾಗಿದೆ.
