ಬೇಲೂರು: ಇಲ್ಲಿನ ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಹಾಗೂ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಪ್ ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
ಬುಧವಾರ ಮತ್ತು ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಲೋಕಯುಕ್ತ ಪೊಲೀಸರು ಆಗಮಿಸಿ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ಅವರನ್ನು ತೀವ್ರವಾದ ವಿಚಾರಣೆ ನಡೆಸಿ, ಸಂಬಂಧಿಸಿದ ನೌಕರರ ವಿಚಾರಣೆಯನ್ನು ಸಹ ನಡೆಸಿರುವರು. ಬುಧವಾರ ಇಬ್ಬರು ಮಧ್ಯವರ್ತಿಗಳನ್ನು ಕರೆಸಿ ವಿಚಾರಣೆ ನಡೆಸಿರುವರು. ಬುಧವಾರದಿಂದ ತಹಶೀಲ್ದಾರ್ ಅವರು ಕಚೇರಿಗೆ ಗೈರು ಹಾಜರಾಗಿರುವರು, ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ದಿಶಾ ಸಭೆಗೆ ಹೋಗಿರುವವರು ಎಂಬ ಮಾಹಿತಿ ತಿಳಿಯಿತ್ತಾದ್ದರೂ, ಲೋಕಾಯುಕ್ತ ಪೊಲೀಸರು ರಾತ್ರಿ 12ಗಂಟೆ ವರೆಗೆ ಇದ್ದರೂ ಸಹ ತಹಶೀಲ್ದಾರ್ ಆಗಮಿಸಲಿಲ್ಲ, ಗುರುವಾರ, ಶುಕ್ರವಾರವೂ ಸಹ ಕಚೇರಿ ಕಡೆ ಸುಳಿದಿಲ್ಲ.
ತಹಶೀಲ್ದಾರ್ ಅವರು 15ದಿನ ರಜೆಯ ಮೇಲೆ ತೆರಳಿದ್ದಾರೆ ಹಾಗೂ ಶಿರಸ್ತೇದಾರ್ ಅವರು ಸಹ ರಜೆ ಮೇಲೆ ತೆರಳಿದ್ದಾರೆ ಎಂಬ ಮಾಹಿತಿ ಬಲಮೂಲಗಳಿಂದ ತಿಳಿದು ಬಂದಿದೆ.
ಪೆಬ್ರವರಿ 24ರಂದು ಬಿಕ್ಕೋಡು ಹೋಬಳಿ ಬಿಳಗುಲಿ ಗ್ರಾಮದ ದಯಾನಂದ ಅವರು ನೀಡಿದ್ದ ದೂರನ್ನು ಸ್ವೀಕರಿಸಿ, ದೂರಿಗೆ ಸಂಬಂಧಿಸಿದ ಆಡಿಯೋ ದಾಖಲೆಗಳನ್ನು ಪರಿಶೀಲಿಸಿ ಕಲಂ7(ಎ) ರೀತ್ಯಾ ಅಂದೇ ಎಪ್ ಐಆರ್ ದಾಖಲಿಸಲಾಗಿದೆ.
ಬಿಳಗುಲಿ ಗ್ರಾಮದ ಸರ್ವೆ ನಂಬರ್ 36ರಲ್ಲಿ ದಯಾನಂದ್ ತಂದೆ ಹರಳಯ್ಯ ರವರಿಗೆ 3 ಎಕರೆ ಜಮೀನು 2002ರಲ್ಲಿ ಮಂಜೂರಾಗಿದ್ದು,ಗ್ರಾಮದ ಇತರೆ 27 ಜನರಿಗೆ ಇದೇ ಸರ್ವೆ ನಂ,ನಲ್ಲಿ 68 ಎಕರೆ ಜಮೀನು ಮಂಜೂರಾಗಿದ್ದು, ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಈ ಜಮೀನುಗಳಿಗೆ ದುರಸ್ತಿ,ಪೋಡು ಆಗಿರುವುದಿಲ್ಲ ಸರ್ಕಾರವು ಪೋಡಿಮುಕ್ತ ಆಂದೋಲನ ಪ್ರಾರಂಭ ಮಾಡಿರುವುದರಿಂದ, ಪೋಡಿ ಮಾಡಿಸಲು ದಯಾನಂದ್ ತನ್ನ ಸ್ನೇಹಿತ ಬಸವರಾಜು ವಿನೊಂದಿಗೆ ತಹಶೀಲ್ದಾರ್ ಅವರನ್ನು ಭೇಟಿ ಮಾಡಿದ್ದಾಗ ತಹಶೀಲ್ದಾರ್ ಅವರು ಕಂದಾಯ ಶಿರಸ್ತೇದಾರ್ ಮೂಲಕ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಶಿರಸ್ತೆದಾರ್ ಅವರು ಮೊದಲ ಕಂತಿನಲ್ಲಿ ತಹಶೀಲ್ದಾರ್ ಗೆ 10 ಲಕ್ಷ ನನ್ನಗೆ, ಸರ್ವೆಯರ್ ಮತ್ತು ಕೇಸ್ ವರ್ಕರ್ ಗಳಿಗೆ ಸೇರಿ 5ಲಕ್ಷ ಸೇರಿ ಒಟ್ಟು 15ಲಕ್ಷ ಲಂಚದ ಹಣವನ್ನು ಬೇಡಿಕೆ ಇಟ್ಟಿರುತ್ತಾರೆ. ಈ ಎಲ್ಲಾ ಸಂಭಾಷಣೆಗಳು ಬಸವರಾಜು ಅವರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಟ್ಟಿರುತ್ತಾರೆ ಎಂಬುದನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
