ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷ ಬಿ. ಆರ್. ಗುರುದೇವ್ ಹಾಗು ಪ್ರದಾನ ಕಾರ್ಯದರ್ಶಿ ಯಾಗಿ ಜಿ ಟಿ ಕುಮಾರ್, ಸಹ ಕಾರ್ಯದರ್ಶಿ ಯಾಗಿ ಜಿ. ಅರ್.ಶ್ರೀನಿವಾಸ್, ಖಜಾಂಚಿಯಾಗಿ ಎಸ್. ಜಿ. ಶ್ರೀದರ್ ಇಂದು ಅಧಿಕಾರ ವಹಿಸಿಕೊಂಡರು.
ಇದೆ ಸಂದರ್ಭದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಅಶಕ್ ಹಾರನಹಳ್ಳಿ ಹಾಗೂ ನಿರ್ದಶಕರಾದ ಕೆ. ಎಂ ಶಿವಣ್ಣ, ಡಾ. ಅರವಿಂದ್, ಬೂವನಹಳ್ಳಿ ಶ್ರೀನಿವಾಸ್. ಕೆ. ಎನ್.ಗುರಪ್ಪ,ಹೆಚ್. ಸುರೇಶ, ಕೆ.ಪ್ರಭಕರ್, ಹಾಗೂ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಉಪಸ್ಥಿತರಿದ್ದರು.
ಅಧೀಕಾರ ಸ್ವೀಕರಿಸಿದ ನಂತರ ನಂತರ ಎಲ್ಲರೂ ಮಲೆನಾಡು ಇಂಜಿನಿಯರಿಂಗ್ ಕಾಲೇಜು. ಒಳಗೊಂಡಂತೆ ಸಂಸ್ಥೆಯ ವಿವಿಧ ಕಾಲೇಜುಗಳಿಗೆ, ವಿದ್ಯಾ ಸಂಸ್ಥೆಗಳಿಗೆ ಭೇಟಿ ನಿಡಿದರು.
