ಚನ್ನರಾಯಪಟ್ಟಣ: ಬೆಂಗಳೂರು ದೂರದರ್ಶನ ಕೇಂದ್ರದ ಚಂದನ ವಾಹಿನಿಯು ಇದೇ ಪ್ರಪ್ರಥಮ ಬಾರಿಗೆ ಆಯೋಜನೆ ಮಾಡುತ್ತಿರುವ ಜಾನಪದ ರಿಯಾಲಿಟಿ ಶೋಗೆ ಚನ್ನರಾಯಪಟ್ಟಣದ ಜೇನುಗೂಡು ಜಾನಪದ ಗಾಯಕರ ತಂಡದ ಗಾಯಕ, ಆಕಾಶವಾಣಿ ಮತ್ತು ದೂರದರ್ಶನ ಜಾನಪದ ಗಾಯಕರಾದ ಶಿವನಗೌಡ ಪಾಟೀಲ ಆಯ್ಕೆ ಆಗಿದ್ದಾರೆ.

ಕಳೆದ ತಿಂಗಳು ಬೆಂಗಳೂರಿನ ದೂರದರ್ಶನ ಕೇಂದ್ರದಲ್ಲಿ ಧ್ವನಿ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದು ಇದರಲ್ಲಿ ಪಾಟೀಲ ಅವರು ಆಯ್ಕೆಯಾಗಿದ್ದಾರೆ.

ಫೆಬ್ರವರಿ ತಿಂಗಳಿನಲ್ಲಿ ದೂರದರ್ಶನ ಕೇಂದ್ರದಲ್ಲಿ ಶೂಟಿಂಗ್ ಪ್ರಕ್ರಿಯೆ ನಡೆದು, ಮಾರ್ಚ್ ನಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದು ಪ್ರಸಾರದ ದಿನಾಂಕಗಳನ್ನು ಮುಂದೆ ತಿಳಿಸಲಾಗುವುದೆಂದು ಜೇನುಗೂಡು ತಂಡದ ಪ್ರಕಟಣೆಯಲ್ಲಿ ತಿಳಿಸಿದೆ.

ಆಯ್ಕೆಯಾದ ಪಾಟೀಲರಿಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್. ಎನ್. ಲೋಕೇಶ್ ಹಡೇನಹಳ್ಳಿ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿಹಳ್ಳಿ, ಕರ್ನಾಟಕ ಜಾನಪದ ಅಕಾಡೆಮಿಯ ಮಾಜಿ ಸದಸ್ಯ ಶ್ರವಣೆರಿ ನಿಂಗಪ್ಪ, ಹೊನ್ನಾರು ಜಾನಪದ ತಂಡದ ಮುಖ್ಯಸ್ಥ ಟಿ. ಆರ್. ಸ್ವಾಮಿ ಮತ್ತು ಪಟ್ಟಣದ ಹಲವು ಸಂಘ ಸಂಸ್ಥೆಗಳ ಮುಖ್ಯಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *