ಚನ್ನರಾಯಪಟ್ಟಣ: ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ತಾಲ್ಲೂಕಿನ ಹೊನ್ನೆಶೆಟ್ಟಿಹಳ್ಳಿ ಗ್ರಾಮದ ಸಂಜು (17) ಮೃತ ವಿದ್ಯಾರ್ಥಿ.

ಚನ್ನರಾಯಪಟ್ಟಣದ ಕ್ರೈಸ್ತ ದಿ ಕಿಂಗ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ತನ್ನ ಅಜ್ಜಿಯ ಮನೆಯಿಂದ ಸೈಕಲ್ ನಲ್ಲಿ ಕಾಲೇಜಿಗೆ ಬರುತ್ತಿದ್ದ ವೇಳೆ, ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚನ್ನರಾಯಪಟ್ಟಣದ ಹಾಸ್ಟೆಲ್ ನಲ್ಲಿ ಉಳಿದುಕೊಂಡು ವ್ಯಾಸಂಗ ಮಾಡುತ್ತಿದ್ದ. ವಯಸ್ಸಾದ ಅಜ್ಜಿಯನ್ನು ನೋಡಲು ನಿನ್ನೆ ಅವರ ಮನೆಗೆ ಹೋಗಿದ್ದ. ಗುರುವಾರ ಎಂದಿನಂತೆ ಸೈಕಲ್ ಮೂಲಕ ಕಾಲೇಜಿಗೆಂದು ಬೆಂಗಳೂರು ಮಂಗಳೂರಿನ ಬೈಪಾಸ್ ಮಾರ್ಗವಾಗಿ ಕಾಲೇಜಿಗೆ ಬರುತ್ತಿದ್ದ ವೇಳೆ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಅಪಘಾತವೆಸಗಿದ ಕಾರು ಚಾಲಕ ಮಾನವೀಯತೆ ಮೆರೆದಿದ್ದು, ಆತನಿಗೆ ಚಿಕಿತ್ಸೆ ಕೂಡಿಸಲು ಮುಂದಾಗುವಷ್ಟರಲ್ಲಿ ವಿದ್ಯಾರ್ಥಿ ಕೊನೆ ಉಸಿರೆಳೆದಿದ್ದಾನೆ. ಇನ್ನು ಈ ಸಂಬಂಧ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *