ಹಾಸನ: ನಗರದ ಕೆ.ಆರ್. ಪುರಂ ಬಡಾವಣೆಯಲ್ಲಿ ತಡರಾತ್ರಿ ಅಡುಗೆ ಕಂಟ್ರಾಕ್ಟರ್ ಆನಂದ್ (48) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಅನೈತಿಕ ಸಂಬಂಧ ವಿಚಾರದಲ್ಲಿ ಉಂಟಾದ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ಒಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಆನಂದ್ ಹಾಗೂ ಧರ್ಮೇಂದ್ರ ನಡುವೆ ವೈಷಮ್ಯವಿತ್ತು.
ಮನೆಯಲ್ಲಿದ್ದ ಆನಂದ್ ನನ್ನು ಕರೆಸಿಕೊಂಡ ಧರ್ಮೇಂದ್ರ ಗಲಾಟೆ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
