ಹಾಸನ: ಹೊಳೆನರಸೀಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಸ್ವಾಮಿ ದಿವ್ಯ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ನಿನ್ನೆ ನಡೆದ ಭಾರೀ ಹೈಡ್ರಾಮಾದಿಂದ ಉಂಟಾಗಿದ್ದ ಗೊಂದಲವನ್ನು ಜಿಲ್ಲಾಡಳಿತ ಬಗೆಹರಿಸಿದೆ.
ರಥದ ಅಲಂಕಾರ ವಸ್ತ್ರದ ವಿಚಾರವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು.
ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿತ್ತಾದರೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭಾಗವಹಿಸದೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು.
ರಥಕ್ಕೆ ಅಳವಡಿಸಿದ್ದ ವಸ್ತ್ರ ತೆಗೆಸಿದ್ದಕ್ಕೆ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿತ್ತಲ್ಲದೆ ರಾತ್ರಿ 11 ರ ವರೆಗೆ ಪ್ರತಿಭಟನೆ ನಡೆಯಿತು.
ನಂತರ ಅಧಿಕಾರಿಗಳು ಎರಡೂ ಕಡೆಯವರ ಮನವೊಲಿಸಿದ್ದು ರಥಕ್ಕೆ ಬಟ್ಟೆಯೇ ಬೇಡ. ಕೇವಲ ಹೂವಿನ ಅಲಂಕಾರ ಮಾತ್ರ ಸಾಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಆ ಮೂಲಕ ದೊಡ್ಡ ಸಮಸ್ಯೆಯೊಂದು ಸುಖಾಂತ್ಯ ಕಂಡಿದೆ.

Leave a Reply

Your email address will not be published. Required fields are marked *