ಹಾಸನ: ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಎಸ್‌ಐಟಿ ಚಾರ್ಜ್‌ಶೀಟ್ ಸಲ್ಲಿಸಿರುವ ಹಿನ್ನೆಲೆ, ಆರೋಪಿ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ತಮ್ಮನ್ನು ಅನ್ಯಾಯವಾಗಿ ಆರೋಪಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿರುವ ವಿಚಾರವಾಗಿದ್ದು, ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ ಪ್ರಕರಣ ಇದಾಗಿದೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಮೊದಲನೆಯವರಾಗಿದ್ದರು ಎಂದು ಹೇಳಿದ ದೇವರಾಜೇಗೌಡ, ಖಾಸಗಿ ಚಾನೆಲ್‌ಗೆ ಪೆನ್‌ಡ್ರೈವ್ ಹೇಗೆ ತಲುಪಿತು ಎಂಬುದರ ಕುರಿತು ಯಾರೂ ಪ್ರಶ್ನಿಸಿಲ್ಲ ಎಂದು ಟೀಕಿಸಿದರು. ಹಾಸನದಲ್ಲಿ ಪೆನ್‌ಡ್ರೈವ್ ತಯಾರಿ ಹಾಗೂ ಹಂಚಿಕೆ ಬಗ್ಗೆ ಎಲ್.ಆರ್. ಶಿವರಾಮೇಗೌಡ ಮಾತನಾಡಿದ ಆಡಿಯೋ ವೈರಲ್ ಆಗಿದ್ದರೂ, ತನಿಖೆಯಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದರೂ, ಒಂದು ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆದಿದೆ ಎಂದು ಅವರು ದೂರಿದರು. ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಮುಂದೆ ತಲೆಬಾಗಬೇಕು, ಶಿಕ್ಷೆ ಅನುಭವಿಸಬೇಕು ಎಂಬುದನ್ನೂ ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿದ ದೇವರಾಜೇಗೌಡ, “ನನ್ನಿಂದ ಯಾರಿಗೂ ಪೆನ್‌ಡ್ರೈವ್ ಅಥವಾ ವಿಡಿಯೋ ಹೋಗಿದ್ದರೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದರು. ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ವಶಕ್ಕೆ ಪಡೆದಿರುವುದರಿಂದ ಅದರಲ್ಲಿ ಏನನ್ನಾದರೂ ಸೇರಿಸುವ ಸಾಧ್ಯತೆ ಇದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಕಾರ್ತಿಕ್ ಗೌಡ ಕಿಂಗ್‌ಪಿನ್ ಎಂದು ಹೇಳಿದ ಅವರು, ಪ್ರಮುಖ ಆರೋಪಿಗಳ ಪಟ್ಟಿಯಲ್ಲಿ ಪ್ರೀತಂ ಗೌಡ ಸೇರಿದಂತೆ ಕೆಲವರ ಹೆಸರುಗಳು ಕಾಣೆಯಾಗಿವೆ ಎಂದು ಪ್ರಶ್ನಿಸಿದರು. ಹೋಟೆಲ್ ಅಶೋಕದಲ್ಲಿ ಪೆನ್‌ಡ್ರೈವ್ ಹಂಚಿಕೆ ನಡೆದ ಮಾಹಿತಿ ಇದ್ದರೂ, ಆ ಸ್ಥಳವನ್ನು ಕಸ್ಟಡಿಗೆ ಪಡೆಯಲಿಲ್ಲ ಎಂದು ಟೀಕಿಸಿದರು.
ಇದಲ್ಲದೆ, ಸಂಸದ ಶ್ರೇಯಸ್ ಪಟೇಲ್ ಅವರಿಗೆ ನೋಟಿಸ್ ನೀಡದಿರುವುದು, ಅಂದಿನ ಎಸ್‌ಪಿ ಮಹಮ್ಮದ್ ಸುಜೀತಾ ಅವರ ಪಾತ್ರದ ಕುರಿತು ತನಿಖೆ ನಡೆಸದಿರುವುದು ಸೇರಿದಂತೆ ಹಲವು ಅಂಶಗಳನ್ನು ಅವರು ಪ್ರಶ್ನಿಸಿದರು. ತನಿಖೆ ನಡೆಸಿದ ಅಧಿಕಾರಿಗಳು ಕಾಂಗ್ರೆಸ್ ಪಕ್ಷದ ಪ್ರಭಾವದಲ್ಲಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಲವರನ್ನು ಬಂಧಿಸದಿರುವುದರ ಕುರಿತೂ ಪ್ರಶ್ನೆ ಎತ್ತಿದ ದೇವರಾಜೇಗೌಡ, “ನಿಜವಾಗಿ ಪೆನ್‌ಡ್ರೈವ್ ಹಂಚಿಕೆ ಮಾಡಿದವರ ಹೆಸರು ಚಾರ್ಜ್‌ಶೀಟ್‌ನಲ್ಲಿ ಇಲ್ಲ” ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ತನಿಖೆ ನಡೆಸಿದ ಅಧಿಕಾರಿಗಳ ವಿರುದ್ಧವೇ ತನಿಖೆ ನಡೆಸುವಂತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವುದಾಗಿ ದೇವರಾಜೇಗೌಡ

Leave a Reply

Your email address will not be published. Required fields are marked *