ಹಾಸನ: ತಾಲ್ಲೂಕಿನ ಕಂಚಮಾರನಹಳ್ಳಿ ಗ್ರಾಮದಲ್ಲಿ ತಂದೆಯೇ ಮಗನನ್ನು ಕೊಚ್ಚಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೃತನನ್ನು ರಂಗಸ್ವಾಮಿ ಅಲಿಯಾಸ್ ಚಂದನ್ (27) ಎಂದು ಗುರುತಿಸಲಾಗಿದೆ. ಆರೋಪಿ ಕೃಷ್ಣೇಗೌಡ (52) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ರಂಗಸ್ವಾಮಿ ಯಾವುದೇ ಕೆಲಸ ಮಾಡದೆ ಕುಡಿತದ ಚಟಕ್ಕೆ ಒಳಗಾಗಿದ್ದು, ಪ್ರತಿದಿನ ಕುಡಿಯಲು ಹಣ ನೀಡುವಂತೆ ಪೋಷಕರನ್ನು ಕಾಡುತ್ತಿದ್ದನೆಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ಇದೇ ವಿಚಾರವಾಗಿ ತಂದೆ-ಮಗನ ನಡುವೆ ವಾಗ್ವಾದ ಸಂಭವಿಸಿದ್ದು, ಬಳಿಕ ಕೋಪಗೊಂಡ ತಂದೆ ಮನೆಯೊಳಗೇ ಮಗನನ್ನು ಕೊಚ್ಚಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *