ಹಾಸನ: ಅರಕಲಗೂಡು ತಾಲೂಕಿನ ಕೊರಟಿಕೆರೆ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿರುವ 600 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು. ಗ್ರಾಮಸ್ಥರು ರಾಜಕೀಯ ಭೇದಭಾವ ಮರೆತು ಒಂದಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬೆಂಗಳೂರಿನಿಂದ ಆಗಮಿಸಿದ ಪ್ರಶಾಂತ್ ತಂಡ ಹಾಗೂ ಗ್ರಾಮದ ಅರ್ಚಕರಿಂದ ಪೂಜಾ ವಿಧಿವಿಧಾನಗಳು ನಡೆಯಿತು. ಶಾಸಕ ಎ.ಮಂಜು, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ, ಹೆಚ್.ಪಿ. ಶ್ರೀಧರ್ ಗೌಡ ಪಾಲ್ಗೊಂಡಿದ್ದರು.
ಶಾಸಕ ಎ. ಮಂಜು ಮಾತನಾಡಿ, ದೇವರ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು. ಹಿಂದೆ ಸಣ್ಣ ಹಂಚಿನ ಮನೆಯಲ್ಲಿ ಇದ್ದ ದೇವಸ್ಥಾನ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಸ್. ದಿನೇಶ್, ಗಣೇಶ್, ಪಟೇಲರ ಕುಟುಂಬಸ್ಥರು, ಎಂ.ಆರ್. ನಾಗೇಶ್, ಮೇಲುಕೋಟೆ ಮಾಸ್ಟ್ರು, ಬಜರಂಗಿ ಮಂಜು, ಎಂ.ಆರ್. ರಘು, ಸ್ವಾಮಿಗೌಡ ರಘು, ಎಂ.ಎಂ. ರವಿಕುಮಾರ್ ಇತರರಿದ್ದರು.
