Category: Uncategorized

ಮಾನವ ಬದುಕಿಗೆ ಬೆಳಕು ತೋರಿದ ಮಹಾಚೇತನ ಕುವೆಂಪು

ಹಾಸನ: ರಾಷ್ಟ್ರಕವಿ ಕುವೆಂಪು ಅವರು ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನೂ ಅದೇ ರೀತಿ ಮಕ್ಕಳ ಸಾಹಿತ್ಯವನ್ನು ಬರೆದು ಜಗದ ಕವಿ ಎನಿಸಿಕೊಂಡರು. ಮಾನವನ ಬದುಕಿಗೆ ಹೊಸ ಬೆಳಕು ನೀಡಿದ ಮಹಾಚಿಂತಕ ಕುವೆಂಪು ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಡಾ.ಎಚ್‌.ಎಲ್‌.ಮಲ್ಲೇಶಗೌಡ ಅವರು…

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ರಂಗೇಗೌಡ ನಿಧನ

ಹಾಸನ: CITU ಜಿಲ್ಲಾ ಅಧ್ಯಕ್ಷ ಧರ್ಮೇಶ್ ಹಾಗೂ ಪತ್ರಕರ್ತ ಎ.ಆರ್. ವೆಂಕಟೇಶ್ ಅವರ ತಂದೆ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ರಂಗೇಗೌಡ (86) ನಿಧನರಾದರು. ನಗರದ MCF ಪಕ್ಕದಲ್ಲಿರುವ ಗೋವಿಂದಪುರದ ತಮ್ಮ ನಿವಾಸದಲ್ಲಿ ನಿಧನರಾದರು. 1945 ಆ. 30ರಂದು ಜನಿಸಿದ ರಂಗೇಗೌಡರು ಸರ್ಕಾರಿ…

ಸಾಲು ಸಾಲು ರಜೆ ಎಫೆಕ್ಟ್: ಸಕಲೇಶಪುರ ಮಾರ್ಗದಲ್ಲಿ ಟ್ರಾಫಿಕ್ ಜಾಮ್

ಸಕಲೇಶಪುರ: ಸಾಲು ಸಾಲು ರಜೆ ಹಾಗು ಹೊಸ ವರ್ಷಾರಂಭದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಪ್ರಯಾಣಿಕರು ಪರದಾಡುವಂತಾಯಿತು. ರಜಾ ದಿನವಾದ ಭಾನುವಾರ 10 ಕಿ.ಮೀ.ಗೂ ಅಧಿಕ ದೂರದ ವರೆಗೆ ವಾಹನಗಳು ನಿಂತಿದ್ದವು. ದೊಡ್ಡತಪ್ಪಲು ಬಳಿ ಟ್ರಾಫಿಕ್‌ ಜಾಮ್‌…

ಪಾನಮತ್ತ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಸಸ್ಪೆಂಡ್‌

ಹಾಸನ: ಪಾನಮತ್ತನಾಗಿ ಮಲಗಿದ್ದ ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸಾದ್‌ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಹಿನ್ನಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಿಯೋಜನೆ ಮೇರೆಗೆ ಮಹಾನಗರ ಪಾಲಿಕೆಯಲ್ಲಿ ಹೆಲ್ತ್‌ಇನ್‌್ಸಪೆಕ್ಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ…

ನಾಪತ್ತೆಯಾಗಿದ್ದ ರೈತನ ಶವ 23 ದಿನಗಳ ಬಳಿಕ ನಾಲೆಯಲ್ಲಿ ಪತ್ತೆ

ಚನ್ನರಾಯಪಟ್ಟಣ: ನಾಪತ್ತೆಯಾಗಿದ್ದ ರೈತನ ಮೃತದೇಹ 23 ದಿನಗಳ ಬಳಿಕ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದ್ದು, ಸಾಲಭಾದೆ ತಾಳಲಾರದೆ ಆತಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ತಾಲ್ಲೂಕಿನ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ಕಾಳೇಗೌಡ (57) ಮೃತರು. ನ. 24 ರಂದು ಮನೆಯಿಂದ ಹೊರ ಹೋಗಿದ್ದ ಅವರು ರಾತ್ರಿಯಾದರೂ…

ಬ್ರೈನ್ ಡೆಡ್ ಆಗಿದ್ದ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು

ಹಾಸನ: ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನ ಬ್ರೈನ್ ಡೆಡ್ ಆದ ಹಿನ್ನಲೆಯಲ್ಲಿ, ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಚನ್ನರಾಯಪಟ್ಟಣ ತಾಲ್ಲೂಕಿನ ಸಾಗತವಳ್ಳಿ ಗ್ರಾಮದ ನಂಜಮ್ಮ ಹಾಗೂ ನಂಜುಂಡೇಗೌಡ ಅವರ ಪುತ್ರ ಯೋಗೇಶ್ (35) ಕಳೆದ…

ಡಿ. 22-23ಕ್ಕೆ ಹಳೇಬೀಡಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ: ಕೆ.ಎಸ್.ಲಿಂಗೇಶ್

ಹಾಸನ: ಬೇಲೂರು ತಾಲ್ಲೂಕು ಹಳೇಬೀಡಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಡಿ. 22 ಹಾಗೂ 23ರಂದು ಶಾಂತಲಾ ಮಹೋತ್ಸವ ಹಾಗೂ ಆಳ್ವಾಸ್ ಸಾಂಸ್ಕೃತಿಕ ವೈಭವ ಹಮ್ಮಿಕೊಳ್ಳಲಾಗಿದೆ ಎಂದು ಶಾಂತಲ ಮಹೋತ್ಸವ ಸಮಿತಿ ಅಧ್ಯಕ್ಷ ಕೆ.ಎಸ್. ಲಿಂಗೇಶ್‌ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ,…

ಪಾರಂಪರಿಕ ಪಟ್ಟಿಗೆ ಬಾಗೇಶಪುರ ರೈಲು ನಿಲ್ದಾಣ: ಏನಿದರ ಮಹತ್ವ

ಹಾಸನ: ಮೈಸೂರು ನೈರುತ್ಯ ರೈಲ್ವೆ ವಿಭಾಗದ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾಗಿರುವ ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರ ಮಹತ್ವದ ತಾಣಗಳ ಪಟ್ಟಿಗೆ ಸೇರಿಸಿದೆ. ಮೈಸೂರು, ಸಾಗರ ಹಾಗು ಬಾಗೇಶಪುರ ನಿಲ್ದಾಣಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. 1960ರಲ್ಲಿ ಆರಂಭವಾದ…

ಜ. 26 ರಂದು ಚನ್ನರಾಯಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ

ಚನ್ನರಾಯಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಜ.26 ರಂದು ಅನಾವರಣ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ನಗರದ ಎಲ್ಲಾ ರಸ್ತೆ…

ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ ಸಹೋದರಿ ಮೋಹಿನಿ ನಿಧನ

ಹಾಸನ: ರಾಜ್ಯೋತ್ಸವ ಪಶಸ್ತಿ ಪುರಸ್ಕೃತರು, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಅವರ ಸಹೋದರಿ ಹೆಚ್.ಎಂ.ಮೋಹಿನಿ ಸಿದ್ದೇಗೌಡ ಅವರು ನಿಧನರಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಮುದ್ರೆಮನೆಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ. ಸಕಲೇಶಪುರ ತಾಲ್ಲೂಕಿನ ಹಂಜಗೋಡನಹಳ್ಳಿ ಗ್ರಾಮದವರಾದ ಮೋಹಿನಿ ಅವರು, ಬೇಲ್ಲೂರು ತಾಲ್ಲೂಕು ಬೆಣ್ಣೂರು ಗ್ರಾಮದ ಸಿದ್ದೇಗೌಡ…