ಹಾಸನ: ಮೊನ್ನೆ ಪ್ರಕಟಗೊಂಡ ಸಿವಿಲ್ ಜಡ್ಜ್ ಪರೀಕ್ಷಾ ಫಲಿತಾಂಶದಲ್ಲಿ ಹಾಸನದ ಎಂ.ಕೃಷ್ಣ ಕಾನೂನು ಕಾಲೇಜಿನ ಮೂವರು ಹಳೆ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದು ಕಾಲೇಜಿಗೂ ಕೀರ್ತಿ ತಂದ್ದಿದ್ದಾರೆ.
ಕೌಶಲ್ ಕೆ.ಬಿ., ಮಣಿಕಂಠ ಎಂ.ಎಸ್ ಮತ್ತು ಶ್ವೇತಾ ಹೆಚ್.ಇ. ಈ ಮೂವರೂ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು ಇವರುಗಳಿಗೆ ಕಾಲೇಜು ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಅಭಿನಂದನೆ ತಿಳಿಸಿದ್ದಾರೆ. ಒಂದೇ ಪ್ರಕಟಣೆಯಲ್ಲಿ ಒಟ್ಟಿಗೆ ಮೂರು ಜನರು ಆಯ್ಕೆಯಾಗುವುದು ವಿಶೇಷ ಸಂದರ್ಭವಾಗಿದ್ದು ಅವರ ಪರಿಶ್ರಮ, ನಿರಂತರ ಅಧ್ಯಯನಕ್ಕೆ ಯಶಸ್ಸು ಸಿಕ್ಕಿದೆ. ಇಂದಿನ ದಿನಗಳಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸಾಕಷ್ಟು ಯುವಕರು ತಯಾರಿ ನಡೆಸುತ್ತಿದ್ದು ಈ ಮೂವರ ಸಾಧನೆ ಮಾದರಿಯಾಗಿದೆ.
