Author: Mallikarjun

ಬೇಲೂರು ಪುರಸಭೆ ಸದಸ್ಯ ಎ.ಆರ್‌.ಅಶೋಕ್‌ ಅನರ್ಹ

ಹಾಸನ: ಪುರಸಭೆ ಮಾಜಿ ಅಧ್ಯಕ್ಷ ಹಾಗು ಹಾಲಿ ಸದಸ್ಯ ಎ.ಆರ್‌.ಅಶೋಕ್‌ ಅವರ ಸದಸ್ಯತ್ವ ಅನರ್ಹಗೊಂಡಿದೆ. ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಕಾಂಗ್ರೆಸ್‌‍ ಸದಸ್ಯತ್ವ ರದ್ದುಗೊಳಿಸುವಂತೆ ನ್ಯಾಯಾಲಯ ಮೆಟ್ಟಿಲೇರಿತ್ತು. ಕಾಂಗ್ರೆಸ್‌‍ನಿಂದ ಚುನಾಯಿತರಾಗಿದ್ದ ಅಶೋಕ್‌ ಅವರು ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಹಿಂದೇಟು ಹಾಕಿದ್ದ ಹಿನ್ನಲೆಯಲ್ಲಿ…

ಸ್ಟೋರ್ ರೂಂನಲ್ಲಿ ರಿಲೇ ಕದ್ದಿದ್ದ ಕಿಡಿಗೇಡಿಗಳ ಹೆಡೆಮುರಿ ಕಟ್ಟಿದ ಹಾಸನ ರೈಲ್ವೆ ಪೊಲೀಸರು

ಹಾಸನ: ಹಾಸನದಲ್ಲಿ ರೈಲ್ವೆ ವಸ್ತುಗಳ ಕಳವು ಪ್ರಕರಣವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಬಯಲಿಗೆಳೆದಿದ್ದು, ಸುಮಾರು ರೂ. 99,000 ಮೌಲ್ಯದ ಸಾಮಗ್ರಿಯನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವಾಸಾರ್ಹ ಮಾಹಿತಿಯ ಮೇರೆಗೆ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಏಪ್ರಿಲ್ 21ರಂದು ಬೆಳಿಗ್ಗೆ ಸುಮಾರು 5:20…

ಆಲೂರಿನ ಮಾದಿಹಳ್ಳಿಯಲ್ಲಿ ಸಿಡಿಲಿಗೆ ವೃದ್ಧೆ ಬಲಿ

ಹಾಸನ: ಆಲೂರು ತಾಲ್ಲೂಕಿನ ಮಾದಿಹಳ್ಳಿ ಸಮೀಪ ಭಾರೀ ಮಳೆಯ ವೇಳೆ ಸಂಭವಿಸಿದ ಸಿಡಿಲು ದುರ್ಘಟನೆಯಲ್ಲಿ ವೃದ್ದೆಯೊಬ್ಬರು ಮೃತಪಟ್ಟಿದ್ದಾರೆ. ಮಳೆ ಜೊತೆ ಗುಡುಗು-ಸಿಡಿಲು ಸಂಭವಿಸುತ್ತಿದ್ದ ಸಂದರ್ಭದಲ್ಲಿ ಮರದ ಕೆಳಗೆ ನಿಂತಿದ್ದ ನೀಲಮ್ಮ (70) ಅವರಿಗೆ ಸಿಡಿಲು ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ…

ಹಸು ತೊಳೆಯಲು ಹೋಗಿದ್ದ ಇಬ್ಬರ ದುರ್ಮರಣ

ಹಾಸನ: ಜಿಲ್ಲೆಯ ಗಂಡಸಿ ಹೋಬಳಿ ನಿಲಗುಂದ ಹೊಸಳ್ಳಿ ಗ್ರಾಮದಲ್ಲಿ ದುರ್ಘಟನೆ ಸಂಭವಿಸಿದ್ದು, ಹಸು ತೊಳೆಯಲೆಂದು ಕೆರೆ ಬಳಿ ತೆರಳಿದ್ದ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಸೋಮನಹಳ್ಳಿಯ ಪ್ರಭಾಕರ್ (45) ಹಾಗೂ ಪ್ರತೀಕ್ (10) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಮನೆಗೆ…

ಹಾಸನ ಜಿಲ್ಲೆಗೆ ಜಲ್ ಜೀವನ ಮಿಷನ್ ಅನುದಾನ ಬಿಡುಗಡೆಗೆ ಮನವಿ

ಹಾಸನ: ಜಿಲ್ಲೆಯ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ ಜಲ್ ಜೀವನ ಮಿಷನ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಬಿಲ್‌ಗಳನ್ನು ಪಾವತಿಸುವಂತೆ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಸಂಸದ ಶ್ರೇಯಸ್ ಪಟೇಲ್…

ಬೇಲೂರು ತಹಶೀಲ್ದಾರ್ ವಿರುದ್ಧ ಲಂಚ ಬೇಡಿಕೆ ಆರೋಪ: ದೂರು ದಾಖಲು

ಬೇಲೂರು: ಇಲ್ಲಿನ ತಹಶೀಲ್ದಾರ್ ಶ್ರೀಧರ್ ಕಂಕಣವಾಡಿ ಹಾಗೂ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಪ್ ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. ಬುಧವಾರ ಮತ್ತು ಗುರುವಾರ ಇಲ್ಲಿನ ತಾಲ್ಲೂಕು ಕಚೇರಿಗೆ ಲೋಕಯುಕ್ತ ಪೊಲೀಸರು ಆಗಮಿಸಿ ಕಂದಾಯ ಶಿರಸ್ತೇದಾರ್ ರಂಗಸ್ವಾಮಿ ಅವರನ್ನು…

ಅರಣ್ಯ ಇಲಾಖೆ ನಿದ್ದೆಗೆಡಿಸಿದ್ದ ಒಂಟಿ ಕೋರೆ ಆನೆ ಕೊನೆಗೂ ಸೆರೆ

ಹಾಸನ: ಸೆರೆಸಿಕ್ಕು ಪರಾರಿಯಾಗಿದ್ದ ಒಂಟಿಕೋರೆಯ ಪುಂಡಾನೆಯನ್ನು ಅರಣ್ಯ ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ. ಮೂರನೇ ದಿನದ ಕಾರ್ಯಾಚರಣೆಯನ್ನು ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಹಾಗು ಇಟಿಎಫ್ ಸಿಬ್ಬಂದಿ, ಕಾಡಾನೆ ಇರುವ ನಿಖರ ಸ್ಥಳವನ್ನು ಪತ್ತೆ ಹಚ್ಚಿದರು. ದೈತ್ಯಾಕಾರದ ಕಾಡಾನೆ ಜೊತೆಗೆ ಇನ್ನೊಂದು…

ಹಾಸನ: ಕ್ರೈಸ್ಟ್ ಪ್ರೌಢಶಾಲೆ ಶೇ. 100 ಸಾಧನೆ

ಹಾಸನ: ಸಿಬಿಎಸ್ಇ ಪರೀಕ್ಷೆಯಲ್ಲಿ ವಿದ್ಯಾನಗರ ಕ್ರೈಸ್ಟ್ ಶಾಲೆ ಶೇಕಡಾ 100 ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ ವಿದ್ಯಾರ್ಥಿ ಸಮರ್ಥ್ ಶ್ರೀನಿವಾಸ್ 96.2% ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯಿಂದ ಪರೀಕ್ಷೆ ಬರೆದಿದ್ದ ಒಟ್ಟು 108 ವಿದ್ಯಾರ್ಥಿಗಳ ಪೈಕಿ 65…

ರೈತನ ಬಲಿ ಪಡೆದು ದೂರದಲ್ಲೇ ನಿಂತ ಕಾಡಾನೆ: ಹೆಚ್ಚಿದ ಆತಂಕ

ಹಾಸನ: ಬೇಲೂರು ತಾಲ್ಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ರೈತ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ರಾಜಶೆಟ್ಟಿ (65) ಮೃತಪಟ್ಟ ರೈತನಾಗಿದ್ದು, ಇಂದು ಬೆಳಿಗ್ಗೆ ತಮ್ಮ ತೋಟಕ್ಕೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಸೊಂಡಿಲಿನಿಂದ ಎತ್ತಿ ಬಿಸಾಡಿ ಬಳಿಕ ತುಳಿದು…

ಗೃಹಲಕ್ಷ್ಮಿ ಬಾಂಡ್ ನೀಡಲು ಲಂಚಕ್ಕೆ ಬೇಡಿಕೆ: ಲೋಕಾ ಬಲೆಗೆ ಉಮಾದೇವಿ

ಹಾಸನ: ಸಕಲೇಶಪುರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರ್‌ವೈಸರ್ ಉಮಾದೇವಿ ಅವರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಆದರ್ಶ್ ಎಂಬುವವರ ಮಗಳ ಗೃಹಲಕ್ಷ್ಮಿ (ಭಾಗಲಕ್ಷ್ಮಿ) ಬಾಂಡ್ ನೀಡಲು ₹1,100 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಎದುರಾಗಿದೆ. ಈ ಕುರಿತು ಆದರ್ಶ್…