Category: ಜಿಲ್ಲಾ

ಬೇಲೂರು: ಆಹಾರ ಅರಸಿ ಗ್ರಾಮಕ್ಕೆ ಲಗ್ಗೆಯಿಟ್ಟ ದೈತ್ಯಾಕಾರದ ಮೂರು ಕಾಡಾನೆಗಳು

ಹಾಸನ: ಬೇಲೂರು ತಾಲ್ಲೂಕಿನ ಮಲಸಾವರ ಗ್ರಾಮದಲ್ಲಿ ಬೆಳ್ಳಂ ಬೆಳಿಗ್ಗೆ ಮೂರು ಕಾಡಾನೆಗಳು ಎಂಟ್ರಿಕೊಟ್ಟು ಆತಂಕ ಸೃಷ್ಟಿಸಿವೆ. ಗ್ರಾಮದೊಳಗೆ ಆಹಾರಕ್ಕಾಗಿ ಅಲೆದಾಡಿದ ಸಲಗಗಳು ರೈತರ ಜಮೀನುಗಳಿಗೆ ನುಗ್ಗಿ ಭತ್ತ, ಕಾಫಿ, ಬಾಳೆ, ಅಡಿಕೆ ಬೆಳೆಗಳಿಗೆ ಹಾನಿ ಉಂಟುಮಾಡಿವೆ. ಮುಂಜಾನೆ ಹೊತ್ತಿನಲ್ಲಿ ಮನೆಗಳಿಂದ ಹೊರಬರಲು…

ಹಾಸನಾಂಬ ಜಾತ್ರೆ: ಸಿಎಂ, ಸಚಿವರಿಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

ಹಾಸನ: ನಗರದ ಅಧಿದೇವತೆ ಹಾಸನಾಂಬ ದರ್ಶನೋತ್ಸವದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಇಂದು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ನೀಡಲಾಯಿತು. ಬೆಂಗಳೂರಿನಲ್ಲಿ ಮೊದಲು ಸಚಿವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಕೆ.ಎಸ್.…

ದೇಶ ಉಳಿಯಬೇಕೆಂದರೆ ಹಿಂದುತ್ವ ಉಳಿಯಲಿ, ಹಿಂದುಗಳ ಜನಸಂಖ್ಯೆ ಹೆಚ್ಚಲಿ: ಸಿ.ಟಿ.‌ರವಿ

ಹಾಸನ: ದೇಶದಲ್ಲಿ ಬ್ರಿಟಿಷರು ಇಲ್ಲವಾದರೂ ಆಕ್ರಮಣಕಾರರ ಮನಸ್ಥಿತಿಯವರಿದ್ದಾರೆ, ದೇಶ ಉಳಿಯಬೇಕೆಂದರೆ ಹಿಂದುತ್ವ ಇರಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.‌ ರವಿ ಹೇಳಿದರು. ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆಯಲ್ಲಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಹಿಂದುತ್ವದ ಭಾವ ಬೆಳೆಸದೆ ಇದ್ದರೆ ದೇಶ…

ಬೆಳ್ಳಂ ಬೆಳಿಗ್ಗೆ ರೈತರ ಜಮೀನಿಗೆ ಲಗ್ಗೆಯಿಟ್ಟ ಗಜಪಡೆ: ಅಪಾರ ಪ್ರಮಾಣದ ಬೆಳೆ ನಾಶ

ಅರಕಲಗೂಡು: ಬೆಳ್ಳಂ ಬೆಳಿಗ್ಗೆ ರೈತರ ಜಮೀನಿಗೆ ಲಗ್ಗೆಯಿಟ್ಟಿರುವ ಗಜಪಡೆ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ತಾಲ್ಲೂಕಿನ ಹೊಸನಗರ ಗ್ರಾಮದಲ್ಲಿ ನಡೆದಿದೆ. ಮರಿಗಳು ಸೇರಿ ಹತ್ತಕ್ಕೂ ಹೆಚ್ಚಿರುವ ಕಾಡಾನೆಗಳ ಹಿಂಡು ಮೆಕ್ಕೆ ಜೋಳ, ಶುಂಠಿ ತಿಂದು, ತುಳಿದು ನಾಶಪಡಿಸಿವೆ. ಹೊಸನಗರ…

ನಿರ್ಲಕ್ಷ್ಯದ ಚಾಲನೆ: ಚಾಲಕನ ಚೇಸ್ ಮಾಡಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು

ಹಾಸನ: ಗೂಡ್ಸ್ ಚಾಲಕನ ಬೇಜವಾಬ್ದಾರಿಯಿಂದ ಬೈಕ್ ಗೆ ಡಿಕ್ಕಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಹಾಸನ ನಗರದ ಕೆ.ಆರ್. ಪುರಂನಲ್ಲಿ ನಡೆದಿದೆ.‌ ಬೈಕ್ ಸವಾರರು…

ವಸತಿ ಯೋಜನೆ ಹಗರಣ ಸೂತ್ರಧಾರ ರಾಜೇಶ್ ಕೊನೆಗೂ ಪೊಲೀಸ್ ವಶಕ್ಕೆ

ಹಾಸನ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಂತರ ರೂ. ಕೊಳ್ಳೆ ಹೊಡೆದ ಪ್ರಕರಣದ ಪ್ರಮುಖ ಆರೋಪಿ ಎಂ.ಕೆ. ರಾಜೇಶ್ ನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಭಾರಿ ಸದ್ದು ಮಾಡುತ್ತಿರುವ ಹಗರಣದ ಪ್ರಮುಖ ಸೂತ್ರಧಾರ…

ಮೊಸಳೆಹೊಸಳ್ಳಿ ಅಪಾಯಕಾರಿ ಸ್ಥಳಗಳಲ್ಲಿ ಹಂಪ್ಸ್: ಸಂಸದರಿಂದ ಪರಿಶೀಲನೆ

ಹಾಸನ: ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ಕ್ಯಾಂಟರ್ ಅವಘಡದಲ್ಲಿ ಹತ್ತು ಜನರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯಾದ್ಯಂತ ಶೋಕ ಸನ್ನಿವೇಶ ಉಂಟುಮಾಡಿತ್ತು. ದುರಂತದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಸ್ಥಳೀಯರ ದುಃಖವನ್ನು ಆಲಿಸಿ, ಮುನ್ನೆಚ್ಚರಿಕಾ…

ಮೃತರ ಕುಟುಂಬಸ್ಥರಿಗೆ ಜೆಡಿಎಸ್ ನಿಂದ ಒಂದು ಲಕ್ಷ ರೂ. ಪರಿಹಾರ ಘೋಷಿಸಿದ ಮಾಜಿ ಪ್ರಧಾನಿ ಎಚ್.ಡಿ.‌ದೇವೇಗೌಡ

ಹಾಸನ: ಮೊಸಳೆ‌ಹೊಸಹಳ್ಳಿಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರಿಗೆ ಜೆಡಿಎಸ್ ಪಕ್ಷದಿಂದ ತಲಾ ಒಂದು ಲಕ್ಷ ರೂ. ಪರಿಹಾರ, ಗಂಭೀರ ಗಾಯಾಳುಗಳಿಗೆ 25 ಸಾವಿರ, ಮಧ್ಯಮ ಗಾಯಾಳುಗಳಿಗೆ 20 ಸಾವಿರ ಹಾಗೂ ಸಣ್ಣ ಪುಟ್ಟ ಗಾಯಾಳುಗಳಿಗೆ 15 ಸಾವಿರ ಪರಿಹಾರ ನೀಡಲಾಗುವುದು ಎಂದು ಮಾಜಿ…

ಅನಾರೋಗ್ಯ ಎಂದ ಕ್ಯಾಂಟರ್ ಚಾಲಕ ಭುವನೇಶ್: ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಹಾಸನ: ಮೊಸಳೆಹೊಸಳ್ಳಿ ದುರ್ಘಟನೆಗೆ ಕಾರಣನಾದ ಕ್ಯಾಂಟರ್ ಚಾಲಕ ಭುವನೇಶ್ ಆರೋಗ್ಯದಲ್ಲಿ ಏರುಪೇರಾಗಿದೆ ಎಂದಿದ್ದು ಆ ಹಿನ್ನೆಲೆಯಲ್ಲಿ ಆತನನ್ನು ಹಿಮ್ಸ್ ಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಹಾಸನದಿಂದ ಹೊಳೆನರಸೀಪುರ ಕಡೆಗೆ ಸಾಗುತ್ತಿದ್ದ ಕ್ಯಾಂಟರ್ ಮೊಸಳೆಹೊಸಳ್ಳಿಯಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಬರುತ್ತಿದ್ದವರ ಮೇಲೆ ಹರಿದಿತ್ತು.…

ಮೊಸಳೆಹೊಸಳ್ಳಿ ದುರಂತ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಭೇಟಿ

ಹಾಸನ: ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ದುರಂತದಲ್ಲಿ ಟ್ರಕ್ ಹರಿದು ಹತ್ತು ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಗ್ರಾಮಕ್ಕೆ ಭೇಟಿ ನೀಡಿ ದುಃಖಿತ ಕುಟುಂಬಗಳನ್ನು ಸಮಾಧಾನಪಡಿಸಿದರು. ಅವರ ಆಗಮನದ ಸಂದರ್ಭದಲ್ಲಿ ನೂರಾರು…