Category: ಜಿಲ್ಲಾ

ಆಸ್ತಿ ವೈಷಮ್ಯ: ಕೆಎಸ್ ಆರ್ ಟಿಸಿ ನೌಕರನಿಗೆ ಬೆಂಕಿ ಹಚ್ಚಿ ಕೊಲೆ

ಹಾಸನ: ಆಸ್ತಿ ವಿಚಾರಕ್ಕಾಗಿ ಸಾರಿಗೆ ಇಲಾಖೆ ನೌಕರನನ್ನು ಸುಟ್ಟು ಕೊಲೆ ಮಾಡಿರುವ ಘಟನೆ ಆಲೂರು ತಾಲ್ಲೂಕಿನಲ್ಲಿ ನಡೆದಿದೆ. ರಾಜನಹಳ್ಳಿ ಗ್ರಾಮದ ವೀರಪ್ಪ (58) ಮೃತರು. ಕೆಎಸ್ ಆರ್ ಟಿಸಿ ಬಸ್ ಚಾಲಕರಾಗಿದ್ದ ವೀರಪ್ಪ ಸಿಐಟಿಯು ಸಕ್ರಿಯ ಕಾರ್ಯಕರ್ತರಾಗಿದ್ದರು. ನೌಕರರ ಪರ ಹೋರಾಟದಲ್ಲಿ…

ಕಾರಣವಿಲ್ಲದೆ ಮನೆ ಬಿಟ್ಟು ಹೋದ ಮಗ: ಚಿಂತೆಯಲ್ಲೇ ಹಾಸಿಗೆ ಹಿಡಿದ ತಂದೆ-ಹಾಸನದಲ್ಲೊಂದು ಮನಕಲುಕುವ ಘಟನೆ

ಹಾಸನ: ಕುಟುಂಬದ ಆಧಾರ ಸ್ತಂಭವಾಗಿದ್ದ ಹದಿಹರೆಯದ ಮಗ ಏಕಾಏಕಿ ನಾಪತ್ತೆಯಾದ್ದರಿಂದ ಮಾನಸಿಕವಾಗಿ ತೀವ್ರ ಕುಗ್ಗಿದ ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಉಸಿರು ನಿಲ್ಲುವ ಮೊದಲು ಒಂದು ಸಲ ನೋಡಬೇಕೆಂದು ಅಂಗಲಾಚುತ್ತಿದ್ದಾರೆ. ದುದ್ದ ಹೋಬಳಿ ಜಕ್ಕೇನಹಳ್ಳಿ ಗ್ರಾಮದ ಜಗದೀಶ್‌ ಎಂಬುವವರ ಮಗ…

ಮಾಜಿ ಪತಿ ಸುಂದರೇಶ್ ಹಾಗೂ ದೇವರಾಜೇಗೌಡ ವಿರುದ್ಧ ಎಫ್ ಐಆರ್ ದಾಖಲಿಸಿದ ಅನ್ನಪೂರ್ಣಗೌಡ

ಹಾಸನ: ಹೊಳೆನರಸೀಪುರ ವಿಧಾನಸಭೆ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಹಾಗು ಮಾಜಿ ಪತಿ ಸುಂದರೇಶ್‌ ಅವರು ತನ್ನ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಮಾತ್ರವಲ್ಲದೆ ಜೀವ ಬೆದರಿಕೆ ಹಾಕಿದ್ದಾರೆಂದು ಮಹಿಳಾ ಧ್ವನಿ ಸಂಘದ ರಾಜ್ಯಾಧ್ಯಕ್ಷೆ ಅನ್ನಪೂರ್ಣಗೌಡ ಅವರು ಎಫ್‌ಐಆರ್‌ ದಾಖಲಿಸಿದ್ದಾರೆ. ಹಲವು…

ಮರಳು ದಂಧೆಕೋರರಿಗೆ ಸಕಲೇಶಪುರ ತಹಶೀಲ್ದಾರ್ ಸುಪ್ರೀತಾ ಬಿಗ್ ಶಾಕ್

ಸಕಲೇಶಪುರ: ತಾಲ್ಲೂಕಿನ ಹೆನ್ನಲಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಶೇಖರಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ತಹಶೀಲ್ದಾರ್ ಸುಪ್ರೀತಾ ಅವರ ನೇತೃತ್ವದಲ್ಲಿ ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ದಾಳಿ ನಡೆಸಿ ಏಳು ಟಿಪ್ಪರ್ ನಷ್ಟು ಮರಳು ವಶಪಡಿಸಿಕೊಂಡ ಘಟನೆ ನಡೆದಿದೆ.…

ಪ್ರೀತಂ ಗೌಡ ಎಂದರೆ ಜೆಡಿಎಸ್ ಗೆ ಭಯ: ನಾರಾಯಣಗೌಡ

ಹಾಸನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂಬರುವ ಚುನಾವಣಾ ಉದ್ದೇಶದಿಂದ ಪಕ್ಷ ಸಂಘಟನೆಗೆ ಸೂಚಿಸಿದ್ದಾರೆ. ವಿಧಾನಸಭಾವಾರು ಮುಖಂಡರ ಸಭೆ ನಡೆಸಲು ಸೂಚಿಸಿದ್ದಾರೆ. ಆ ರೀತಿ ಪ್ರೀತಂ ಗೌಡ ಕೆಲಸ ಮಾಡಿದ್ದಾರೆ. ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾರಾಯಣಗೌಡ ಹೇಳಿದರು. ಸುದ್ದಿಗೋಷ್ಟಿಯಲ್ಲಿ…

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿಷೇಧಾಜ್ಞೆ: ಜಿಲ್ಲಾಧಿಕಾರಿ ಆದೇಶಕ್ಕೆ ಕಾರಣ ಏನು?

ಸಕಲೇಶಪುರ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ತಾಲ್ಲೂಕಿನ ದೋಣಿಗಾಲ್‌ ರಸ್ತೆಯಿಂದ ಕೆಸಗನಹಳ್ಳಿ ರಸ್ತೆಯ 100 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಸ್‌‍.ಲತಾಕುಮಾರಿ ಆದೇಶಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರ ಮಂಜ್ರಾಬಾದ್‌ ಕೋಟೆಯ ಸಮೀಪ ದೋಣಿಗಲ್‌ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಿರ್ಮಾಣ…

ಚನ್ನರಾಯಪಟ್ಟಣ: ಪ್ರೀತಿಸಿ ಮದುವೆಯಾದವರ ಚಿನ್ನಾಭರಣದ ಮೇಲೆ ಬಿತ್ತು ಕಳ್ಳರ ಕಣ್ಣು

ಚನ್ನರಾಯಪಟ್ಟಣ: ಮನೆಯವರ ವಿರೋಧದ ನಡುವೆ ಮದುವೆಯಾದ ನವ ಜೋಡಿಗಳು ಬೈಕ್‌ನ ಮುಂಭಾಗದ ಬ್ಯಾಗ್‌ನಲ್ಲಿಟ್ಟಿದ್ದ ಸುಮಾರು 5 ಲಕ್ಷ ರೂ. ಬೆಲೆಯ ಚಿನ್ನಾಭರಣವನ್ನು ಅಲ್ಲೇ ಬಿಟ್ಟಿದ್ದರ ಪರಿಣಾಮ ಕಳುವಾಗಿರುವ ಘಟನೆ ತಾಲ್ಲೂಕಿನ ರೇಚಿಹಳ್ಳಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆ ತಿಪಟೂರು…

ಜಮೀನು ಮಾರಾಟ ಮಾಡಿದರೂ ತೀರದ ಸಾಲ: ನೇಣಿಗೆ ಶರಣಾದ ರೈತ

ಬೇಲೂರು: ಜಮೀನು ಮಾರಾಟ ಮಾಡಿದರೂ ಸಾಲ ತೀರದ ಹಿನ್ನಲೆಯಲ್ಲಿ ಮನನೊಂದ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಕಟ್ಟೆಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆ.ಜೆ.ರಮೇಶ್‌ ಮೃತರು. ಕೃಷಿಗಾಗಿ ಸುಮಾರು 6 ಲಕ್ಷ ರೂ. ಬ್ಯಾಂಕ್‌ ಹಾಗು 20 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.…

ಕೂಗಿದ ಚೀಟಿ ಹಣ ಕೊಡಲಿಲ್ಲ – ಕೇಳಿದ್ರೆ ಜೀವ ಬೆದರಿಕೆ ಹಾಕಿದ್ರು: ಮನನೊಂದ ವ್ಯಕ್ತಿ ಆತ್ಮಹತ್ಯೆ

ಹೊಳೆನರಸೀಪುರ: ಚೀಟಿ ಹಣ ಕೊಡದೆ ಸತಾಯಿಸಿದ್ದಲ್ಲದೆ ವಾಪಾಸ್‌‍ ಹಣ ಕೊಡುವಂತೆ ಬೆದರಿಸಿ ನಿಂದಿಸಿದ್ದಕ್ಕೆ ಮನನೊಂದ ವ್ಯಕ್ತಿ ವಿಷ ಸೇವಿಸಿ ಆತಹತ್ಯೆಗೆ ಶರಣಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ರಾಮು (38) ಆತಹತ್ಯೆ ಮಾಡಿ ಕೊಂಡಿದ್ದಾರೆ. ಚನ್ನರಾಯ ಪಟ್ಟಣದಲ್ಲಿ ಹಲವು ವರ್ಷಗಳಿಂದ ವ್ಯಾಪಾರ…

ಹಾಸನ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಂಪುಟ ಅಸ್ತು

ಹಾಸನ: ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಇಂದಿನ ಸಚಿವ ಸಂಪುಟ ಅನುಮೋದನೆ ನೀಡಿದೆ. ಎರಡೂ ಯೋಜನೆಗಳು ನೀರಾವರಿ ವ್ಯಾಪ್ತಿಯಲ್ಲಿದ್ದು, ಸ್ಥಳೀಯರಿಂದ ಬಹಳ ದಿನಗಳ ಕಾಲ ಬಾಕಿ ಉಳಿದಿದ್ದ ಬೇಡಿಕೆಗಳಾಗಿದ್ದವು. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಸ್ಥಳೀಯ ಜನರು ಗಂಡಸಿ ಹೋಬಳಿ ಕೆಂಕೆರೆ…