Category: ಜಿಲ್ಲಾ

ಕಂಠಪೂರ್ತಿ ಕುಡಿದು ಬಿಲ್ ಕೇಳಿದ್ದಕ್ಕೆ ಬಾರ್ ಸಿಬ್ಬಂದಿಗೆ ಹೊಡೆದು ರೌಡಿಸಂ ಪ್ರದರ್ಶಿಸಿದ ಗುಂಪು

ಹಾಸನ: ಕಂಠಪೂರ್ತಿ ಕುಡಿದು ಬಿಲ್‌ ಕೇಳಿದಾಗ ಐವರು ಸೇರಿ ರೆಸ್ಟೋರೆಂಟ್‌ನ ಕುರ್ಚಿ, ಕಿಟಕಿ ಗಾಜು ಒಡೆದು ಮದ್ಯದ ಬಾಟಲಿಯಿಂದ ಸಿಬ್ಬಂದಿ ತಲೆಗೆ ಹೊಡೆದಿರುವ ಘಟನೆ ನಗರದ ಕ್ವಾಲಿಟಿ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ನಗರದ ರಘು, ದರ್ಶನ್‌, ತೇಜು, ಲಕ್ಷ್ಮೀಶ ಹಾಗು…

ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಸನ್ನ ಕುಮಾರ್ ತೀರ್ಪುಗಾರ

ಹಾಸನ: ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಾಯಕ ಕಾರ್ಯದರ್ಶಿ ಹಾಗೂ ಅಥ್ಲೆಟಿಕ್ಸ್ ತರಬೇತಿದಾರ ಎಸ್.ಎಲ್. ಪ್ರಸನ್ನಕುಮಾರ್ ಅವರು ನವದೆಹಲಿಯಲ್ಲಿ ನಡೆಯಲಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌‌ಗೆ ತೀರ್ಪುಗಾರರಾಗಿ ಆಯ್ಕೆಯಾಗಿದ್ದಾರೆ. ಜಗತ್ತಿನಲ್ಲಿ ಒಲಂಪಿಕ್ ನಂತರ ಅತಿ ದೊಡ್ಡ ಕ್ರೀಡಾಕೂಟವೆಂದು ಪರಿಗಣಿಸಲ್ಪಡುವ ಈ ಸ್ಪರ್ಧೆ…

ಹಾಸನ: ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ರಸ್ತೆಯಲ್ಲೇ ಕುಸಿದು ಬಿದ್ದು ಸಾವು

ಹಾಸನ: ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಒಬ್ಬ ವ್ಯಕ್ತಿ ಹಠಾತ್ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಮೃತರನ್ನು ನಗರದ ವಿರೂಪಾಕ್ಷ (59) ಎಂದು ಗುರುತಿಸಲಾಗಿದೆ. ಅವರು ಪ್ರಿಂಟಿಂಗ್ ಪ್ರೆಸ್ ಮಾಲೀಕರಾಗಿದ್ದು, ರವಿ ಎಂಬ ಹೆಸರಿನಿಂದಲೂ ಪರಿಚಿತರಾಗಿದ್ದರು. ಪ್ರಾಥಮಿಕ ಮಾಹಿತಿಯ…

ಎಂಟಿಇಎಸ್ ಹೆಸರು ಹಾಳಾಗಲು ಅಶೋಕ್ ಹಾರನಹಳ್ಳಿ ಕಾರಣ: ಆರೋಪ

ಹಾಸನ: 50 ವರ್ಷಗಳಿಂದ ಅವರು ಮಾಡಿದ ಅವ್ಯವಹಾರ ಬಯಲಿಗೆ ಬರುತ್ತದೆಂದು ಮಾಜಿ ಅಡ್ವೋಕೆಟ್ ಜನರಲ್ ಹಾಗೂ ಎಂಟಿಇಎಸ್ ಮಾಜಿ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಸಂಸ್ಥೆಗೆ ಕೆಟ್ಟ ಹೆಸರು ತರಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಆರೋಪಿಸಿದರು.…

ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಕಾರ್ಯಕಾರಿ ಸಮಿತಿ ಸಭೆ

ಹಾಸನ: ಭಾರಿ ಕುತೂಹಲ ಕೆರಳಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯಕಾರಿ ಮಂಡಳಿಯ ಅವಿಶ್ವಾಸ ನಿರ್ಣಯ ಸಭೆ ಇಂದು ನಡೆದಿದ್ದು ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಯಿತು. ಅಶೋಕ್ ಹಾರನಳ್ಳಿ ಬಣದಲ್ಲಿ ಗುರುತಿಸಿಕೊಂಡ ಹದಿಮೂರು ಜನರು ನೂತನ ಅಧ್ಯಕ್ಷರಾಗಿ ಬಿ.ಆರ್. ಗುರುದೇವ್, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್…

ಹಾಸನ: ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮರ್ಕಳ್ಳಿ ಗ್ರಾಮದಲ್ಲಿ ಮುಂಜಾನೆ ಕಾಡಾನೆಗಳು ವಾಸದ ಮನೆ ಮೇಲೆ ದಾಳಿ ನಡೆಸಿ ಅಪಾರ ಹಾನಿ ಮಾಡಿವೆ. ಗ್ರಾಮದ ಗೌರಮ್ಮ ಅವರಿಗೆ ಸೇರಿದ ಮನೆಯನ್ನು ಗಜಪಡೆಯು ಜಖಂ ಮಾಡಿ, ಶೆಡ್ ಕೆಡವಿ, ಪಾತ್ರೆಗಳನ್ನು ತುಳಿದು ಹಾಕಿದೆ. ಹೆಂಚುಗಳನ್ನು…

ಗಂಧದ ಕೋಠಿ ಕಾಲೇಜು ಪಕ್ಕ ಅಪರಿಚಿತ ವ್ಯಕ್ತಿ ಶವ ಪತ್ತೆ: ಸ್ಥಳಕ್ಕೆ ಪೊಲೀಸರ ದೌಡು ದೌಡು

ಹಾಸನ: ನಗರದ ಆರ್‌.ಸಿ.ರಸ್ತೆ, ಗಂಧದ ಕೋಠಿ ಆವರಣದಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಕಾಲೇಜು ಮುಂಭಾಗ ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಪಂಚೆ, ಬಿಳಿ ಶರ್ಟ್ ಧರಿಸಿದ್ದ ಮತ್ತು ತಲೆಗೆ ಟವೆಲ್ ಕಟ್ಟಿಕೊಂಡಿದ್ದ ವ್ಯಕ್ತಿಯ…

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಮೂವರು ನಿರ್ದೇಶಕರ ಅಮಾನತು

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ೩ ನಿರ್ದೇಶಕರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆರ್.ಟಿ.‌ದ್ಯಾವೇಗೌಡ ಆದೇಶಿಸಿದ್ದಾರೆ. ನಿರ್ದೇಶಕರಾದ ಡಾ. ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ ಸಂಸ್ಥೆಯ ನಿರ್ದೇಶಕರುಗಳು ಯಾರೂ…

ಜಮೀನು ವ್ಯಾಜ್ಯ: ಮಾರಕಾಸ್ತ್ರಗಳಿಂದ ಹಲ್ಲೆ, ಆಕ್ರೋಶಕ್ಕೆ ಕಾರು ಜಖಂ

ಅರಕಲಗೂಡು: ಜಮೀನು ವ್ಯಾಜ್ಯ ಸಂಬಂಧ ದೂರು ಸಲ್ಲಿಸಲು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯ ಜನ ಸಂಪರ್ಕ ಸಭೆಗೆ ಬರುತ್ತಿದ್ದ ಕುಟುಂಬದ ಐವರ ಮೇಲೆ ಸಂಬಂಧಿಕರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.…

ನಾಳೆ ಕೃಷ್ಣಬೈರೇಗೌಡ ಅಹವಾಲು ಸ್ವೀಕಾರ

ಹಾಸನ: ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸೆ.6 ರಂದು ಬೆಳಗ್ಗೆ 10.30 ರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಕುಂದು ಕೊರತೆ ಅಹವಾಲಗಳನ್ನು ದಾಖಲಿಸಲು ಸರ್ಕಾರವು ಏಕೀಕೃತ ಸಾರ್ವಜನಿಕ…