ಹಾಸನ: ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆಗಳ ದಾಂಧಲೆ

ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮರ್ಕಳ್ಳಿ ಗ್ರಾಮದಲ್ಲಿ ಮುಂಜಾನೆ ಕಾಡಾನೆಗಳು ವಾಸದ ಮನೆ ಮೇಲೆ ದಾಳಿ ನಡೆಸಿ ಅಪಾರ ಹಾನಿ ಮಾಡಿವೆ. ಗ್ರಾಮದ ಗೌರಮ್ಮ ಅವರಿಗೆ ಸೇರಿದ ಮನೆಯನ್ನು ಗಜಪಡೆಯು ಜಖಂ ಮಾಡಿ, ಶೆಡ್ ಕೆಡವಿ, ಪಾತ್ರೆಗಳನ್ನು ತುಳಿದು ಹಾಕಿದೆ. ಹೆಂಚುಗಳನ್ನು…

ಗಂಧದ ಕೋಠಿ ಕಾಲೇಜು ಪಕ್ಕ ಅಪರಿಚಿತ ವ್ಯಕ್ತಿ ಶವ ಪತ್ತೆ: ಸ್ಥಳಕ್ಕೆ ಪೊಲೀಸರ ದೌಡು ದೌಡು

ಹಾಸನ: ನಗರದ ಆರ್‌.ಸಿ.ರಸ್ತೆ, ಗಂಧದ ಕೋಠಿ ಆವರಣದಲ್ಲಿರುವ ಬಾಲಕಿಯರ ವಿಭಜಿತ ಸರ್ಕಾರಿ ಪದವಿ ಕಾಲೇಜು ಮುಂಭಾಗ ಸುಮಾರು 50 ರಿಂದ 55 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಪಂಚೆ, ಬಿಳಿ ಶರ್ಟ್ ಧರಿಸಿದ್ದ ಮತ್ತು ತಲೆಗೆ ಟವೆಲ್ ಕಟ್ಟಿಕೊಂಡಿದ್ದ ವ್ಯಕ್ತಿಯ…

ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಮೂವರು ನಿರ್ದೇಶಕರ ಅಮಾನತು

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ೩ ನಿರ್ದೇಶಕರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆರ್.ಟಿ.‌ದ್ಯಾವೇಗೌಡ ಆದೇಶಿಸಿದ್ದಾರೆ. ನಿರ್ದೇಶಕರಾದ ಡಾ. ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ ಸಂಸ್ಥೆಯ ನಿರ್ದೇಶಕರುಗಳು ಯಾರೂ…

ಜಮೀನು ವ್ಯಾಜ್ಯ: ಮಾರಕಾಸ್ತ್ರಗಳಿಂದ ಹಲ್ಲೆ, ಆಕ್ರೋಶಕ್ಕೆ ಕಾರು ಜಖಂ

ಅರಕಲಗೂಡು: ಜಮೀನು ವ್ಯಾಜ್ಯ ಸಂಬಂಧ ದೂರು ಸಲ್ಲಿಸಲು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯ ಜನ ಸಂಪರ್ಕ ಸಭೆಗೆ ಬರುತ್ತಿದ್ದ ಕುಟುಂಬದ ಐವರ ಮೇಲೆ ಸಂಬಂಧಿಕರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.…

ನಾಳೆ ಕೃಷ್ಣಬೈರೇಗೌಡ ಅಹವಾಲು ಸ್ವೀಕಾರ

ಹಾಸನ: ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಸೆ.6 ರಂದು ಬೆಳಗ್ಗೆ 10.30 ರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಕುಂದು ಕೊರತೆ ಅಹವಾಲಗಳನ್ನು ದಾಖಲಿಸಲು ಸರ್ಕಾರವು ಏಕೀಕೃತ ಸಾರ್ವಜನಿಕ…

ಸೆ. 18ಕ್ಕೆ ಶ್ರವಣಬೆಳಗೊಳದಲ್ಲಿ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

ಶ್ರವಣಬೆಳಗೊಳ: ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನಡೆದ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸಮ್ಮೇಳನಾಧ್ಯಕ್ಷರಾಗಿದ್ದ ದಿ. ಡಾ. ಸಿದ್ದಲಿಂಗಯ್ಯ ಅವರ ಹೆಸರಿನಲ್ಲಿ ಸ್ಥಾಪಿತವಾಗಿರುವ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪುರಸ್ಕಾರಕ್ಕೆ 2024ನೇ ಸಾಲಿಗೆ ಜನಪದ ಗಾಯಕ ಎಚ್.ಜನಾರ್ಧನ್(ಜನ್ನಿ) ಮತ್ತು 2025ನೇ ಸಾಲಿಗೆ…

ಸಕಲೇಶಪುರದಲ್ಲಿ ಶಾಸಕ ಸಿಮೆಂಟ್ ಮಂಜು vs ತಹಶೀಲ್ದಾರ್ ಸುಪ್ರಿಯ: ಮುಸುಕಿನ ಗುದ್ದಾಟಕ್ಕೆ ಕಾರಣವೇನು?

ಸಕಲೇಶಪುರ: ಸಾರ್ವಜನಿಕರೊಂದಿಗೆ ಯಾಕೆ ಕೂಗಾಡುತ್ತಿರ ನಿಧಾನ ಮಾತನಾಡಿ ಎಂದು ಶಾಸಕರು ಸೂಚಿಸಿದರೆ, ನಾನೇಲ್ಲಿ ಕೂಗಾಡುತಿದ್ದೆನೆ ನೀವೇ ಕೂಗಾಡುತ್ತಿರುವುದು ಎಂದು ತಹಸೀಲ್ದಾರ್ ಸುಪ್ರೀಯ ಹೇಳಿದ್ದರಿಂದ ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದ ಘಟನೆಗೆ ಪಟ್ಟಣದ ಮಿನಿ ವಿಧಾನಸೌಧ ಸಾಕ್ಷಿಯಾಯಿತು. ಮಿನಿ ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ…

ಹಾಸನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 63 ಕೋಟಿ ರೂ.‌ಕೊಡಲು ಸಚಿವ ಸಂಪುಟ ಅನುಮೋದನೆ

ಹಾಸನ: ಹಾಸನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚುವರಿ 63.34 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಒಪ್ಪಿಗೆ ದೊರೆತಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹಾಗೂ ಸಂಸದ ಶ್ರೇಯಸ್ ಪಟೇಲ್ ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ ಸರಣಿ ಹೃದಯಾಘಾತಗಳಿಂದ…

ತ್ಯಾಗ-ಸೇವೆಗೆ ಒಲಿದ ರಾಜ್ಯ ಮಟ್ಟದ ಮಾನ್ಯತೆ: ಶಿಕ್ಷಕ ಪುರುಷೋತ್ತಮ್ ಗೆ ರಾಜ್ಯ ಶಿಕ್ಷಕರ ಪ್ರಶಸ್ತಿ

ಹಾಸನ: ಆಲೂರು ತಾಲ್ಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಲ್. ಪುರುಷೋತ್ತಮ ಅವರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿ ಘೋಷಣೆಯಾಗಿದೆ. ಸೆಪ್ಟೆಂಬರ್‌ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ…

ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆದರೆ ದಸರಾ ಆಹ್ವಾನ ತಿರಸ್ಕರಿಸಿ: ಬಾನು ಮುಷ್ತಾಕ್ ಗೆ ಮನವಿ

ಹಾಸನ: ಸಾಹಿತಿ ಬಾನು ಮುಷ್ತಾಕ್ ಅವರು ಭುವನೇಶ್ವರಿ ಕುರಿತು ಮಾತನಾಡಿ ಹಿಂದು ಸಂಪ್ರದಾಯಕ್ಕೆ ಅವಮಾನ ಮಾಡಿದ್ದು ಅವರು ದಸರಾ ಉದ್ಘಾಟಿಸುವುದು ಬೇಡವೆಂದು ರಾಷ್ಟ್ರ ರಕ್ಷಣಾ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಸಾಹಿತಿ ಬಾನು ಮುಷ್ತಾಕ್ ಅವರ ಮನೆಗೆ ಭೇಟಿ ನೀಡಿದ ಪದಾಧಿಕಾರಿಗಳು,…