Category: ಜಿಲ್ಲಾ

ಬುಲೆರೋ-ಬೈಕ್ ನಡುವೆ ಭೀಕರ ಅಪಘಾತ: ಒಬ್ಬ ಸಾವು

ಅರಕಲಗೂಡು: ತಾಲ್ಲೂಕಿನ ರಾಮನಾಥಪುರ ಹೋಬಳಿ ವಡ್ರಳ್ಳಿ ಗೇಟ್ ಬಳಿ ಬುಲೆರೋ ವಾಹನ ಮತ್ತು ದ್ವಿಚಕ್ರ ವಾಹನ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಮೃತರನ್ನು ಕೂಡ್ಲೂರು ಗ್ರಾಮದ ಸೀನು ಎಂದು ಗುರುತಿಸಲಾಗಿದೆ.…

ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿ: ಹಲವರಿಗೆ ಗಾಯ

ಹಾಸನ: ಮದುವೆಗೆ ತೆರಳುತ್ತಿದ್ದ ಮಿನಿ ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು 20 ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್‌ನಲ್ಲಿ ನಡೆದಿದೆ. ವನಗೂರು ಗ್ರಾಮದಿಂದ ಬಸಪ್ಪ ಎಂಬುವವರ ಕುಟುಂಬ ಸದಸ್ಯನ ಮದುವೆಗೆ…

ಮನವಿ ಸ್ವೀಕರಿಸಲು ಬಾರದ ಜಿಲ್ಲಾಧಿಕಾರಿ: ಬಿಎಂ ರಸ್ತೆ ತಡೆ ನಡೆಸಿದ ವಕೀಲರು

ಹಾಸನ: ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ನ್ಯಾಯಾಲಯ ಆವರಣದಿಂದ ಮೆರವಣಿಗೆಯಲ್ಲಿ ಬಂದ ನೂರಾರು ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ…

ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಕೆಂಡ ಹಾಯ್ದುದ್ದು ಅಪರಾಧ: ಪ್ರೊ. ನರೇಂದ್ರ ನಾಯಕ್ ಪತ್ರ

ಹಾಸನ: ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವೇಳೆ ಕೆಂಡ ಹಾಯ್ದಿದ್ದ ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ ಅವರಿಗೆ ರಾಷ್ಟ್ರೀಯ ವಿಚಾರವಾದಿಗಳ ಸಂಘದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್‌ ಪತ್ರ ಬರೆದಿದ್ದು, ‘ಕಾಯ್ದೆಯಡಿ ಇದು ಅಪರಾಧ’ ಎಂದಿದ್ದಾರೆ. ‘ಕೆಂಡ ಹಾಯಲು ವಿಜ್ಞಾನ ಕಾರಣವೇ ಹೊರತು ದೈವಿಕ ಶಕ್ತಿಯಲ್ಲ.…

ಕಂದಾಯ ಇಲಾಖೆಯ ನಾಲ್ವರು ನೌಕರರ ಅಮಾನತು ಆದೇಶ ವಾಪಸ್ ಪಡೆದ ಹಾಸನ ಜಿಲ್ಲಾಧಿಕಾರಿ

ಹಾಸನ: ಶಕ್ತಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಕರ್ತವ್ಯ ಲೋಪ ಆರೋಪದಡಿ ಅಮಾನತು ಮಾಡಲಾಗಿದ್ದ ಕಂದಾಯ ಇಲಾಖೆಯ ನಾಲ್ವರು ನೌಕರರ ಅಮಾನತು ಆದೇಶವನ್ನು ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ ವಾಪಸ್ ಪಡೆದಿದ್ದಾರೆ. ರಾಜಸ್ವ ನಿರೀಕ್ಷಕಾರದ ಎಂ.ಎಸ್. ಗೋವಿಂದರಾಜು (ಕೆ.ಹೊಸಕೋಟೆ), ಯೋಗಾನಂದ (ಹೊಳೆನರಸೀಪುರ), ಸಂತೋಷ್…

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆ ಸಾವು

ಅರಕಲಗೂಡು: ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಜವರಮ್ಮ (61) ಮೃತರು. ಮಧ್ಯರಾತ್ರಿ 12.30ರ ಸಮಯದಲ್ಲಿ ಜೋರು ಮಳೆ ಸುರಿದು‌ ಗೊಡೆ ಕುಸಿದಿದೆ. ಜಯಮ್ಮನಿಗೆ ಎರಡು ಗಂಡು ಮತ್ತು ಮೂರು ಹೆಣ್ಣು…

ಕೊಣನೂರಿನಲ್ಲಿ ಭಾರಿ ಮಳೆ: ಬಾರ್ ಗೆ ನುಗ್ಗಿದ ನೀರು, ತೆಂಗಿನ ತೋಟ ಜಲಾವೃತ

ಕೊಣನೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊಣನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆ 5 ಗಂಟೆಗೆ ಆರಂಭವಾದ ಮಳೆಯು ರಾತ್ರಿ 10.30ರ ವರೆಗೆ ನಿರಂತರವಾಗಿ ಸುರಿದು ಪಟ್ಟಣದ ಬೀದಿಗಳು, ಮನೆಗಳು ಹಾಗೂ ತೋಟಗಳು ನೀರಿನಲ್ಲಿ ಮುಳುಗುವಂತಾಯಿತು.…

ನಡೆದು ಹೋಗುತ್ತಿದ್ದಾಗ ಎಡವಿಬಿದ್ದು ವ್ಯಕ್ತಿ ಸಾವು

ಹಾಸನ: ನಗರದ ಹಾಲುವಾಗಿಲು ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗಲೇ ಎಡವಿಬಿದ್ದು ಮೃತಪಟ್ಟಿದ್ದಾರೆ. ಗುಡ್ಡೇಗೌಡನಕೊಪ್ಪಲು ನಿವಾಸಿ ಪ್ರಕಾಶ್ (50) ಮೃತರು. ಮದ್ಯವ್ಯಸನಿಯಾಗಿದ್ದ ಪ್ರಕಾಶ್ ಕುಡಿದ ಅಮಲಿನಲ್ಲಿ ಮನೆಗೆ ತೆರಳುತ್ತಿದ್ದರು. ಆಯತಪ್ಪಿ ಬಿದ್ದಿದ್ದರಿಂದ ಎದೆ ಭಾಗಕ್ಕೆ ಏಟಾಗಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ…

ಅರಸೀಕೆರೆಯಲ್ಲಿ ವರುಣನ ಅಬ್ಬರ: ಬಸ್ ನಿಲ್ದಾಣ ಜಲಾವೃತ

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅರಸೀಕೆರೆ ನಗರ ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿದಂತಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ, ಅರಸೀಕೆರೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. ನಿಲ್ದಾಣದ ಒಳಗೆ ಮೊಣಕಾಲು ಎತ್ತರದಷ್ಟು ಮಳೆ ನೀರು…