Category: ಜಿಲ್ಲಾ

ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ವೃದ್ಧೆ ಸಾವು

ಅರಕಲಗೂಡು: ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಜವರಮ್ಮ (61) ಮೃತರು. ಮಧ್ಯರಾತ್ರಿ 12.30ರ ಸಮಯದಲ್ಲಿ ಜೋರು ಮಳೆ ಸುರಿದು‌ ಗೊಡೆ ಕುಸಿದಿದೆ. ಜಯಮ್ಮನಿಗೆ ಎರಡು ಗಂಡು ಮತ್ತು ಮೂರು ಹೆಣ್ಣು…

ಕೊಣನೂರಿನಲ್ಲಿ ಭಾರಿ ಮಳೆ: ಬಾರ್ ಗೆ ನುಗ್ಗಿದ ನೀರು, ತೆಂಗಿನ ತೋಟ ಜಲಾವೃತ

ಕೊಣನೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಕೊಣನೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಜೆ 5 ಗಂಟೆಗೆ ಆರಂಭವಾದ ಮಳೆಯು ರಾತ್ರಿ 10.30ರ ವರೆಗೆ ನಿರಂತರವಾಗಿ ಸುರಿದು ಪಟ್ಟಣದ ಬೀದಿಗಳು, ಮನೆಗಳು ಹಾಗೂ ತೋಟಗಳು ನೀರಿನಲ್ಲಿ ಮುಳುಗುವಂತಾಯಿತು.…

ನಡೆದು ಹೋಗುತ್ತಿದ್ದಾಗ ಎಡವಿಬಿದ್ದು ವ್ಯಕ್ತಿ ಸಾವು

ಹಾಸನ: ನಗರದ ಹಾಲುವಾಗಿಲು ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗಲೇ ಎಡವಿಬಿದ್ದು ಮೃತಪಟ್ಟಿದ್ದಾರೆ. ಗುಡ್ಡೇಗೌಡನಕೊಪ್ಪಲು ನಿವಾಸಿ ಪ್ರಕಾಶ್ (50) ಮೃತರು. ಮದ್ಯವ್ಯಸನಿಯಾಗಿದ್ದ ಪ್ರಕಾಶ್ ಕುಡಿದ ಅಮಲಿನಲ್ಲಿ ಮನೆಗೆ ತೆರಳುತ್ತಿದ್ದರು. ಆಯತಪ್ಪಿ ಬಿದ್ದಿದ್ದರಿಂದ ಎದೆ ಭಾಗಕ್ಕೆ ಏಟಾಗಿದೆ. ಸ್ಥಳೀಯರು ಕೂಡಲೇ ಆಸ್ಪತ್ರೆಗೆ…

ಅರಸೀಕೆರೆಯಲ್ಲಿ ವರುಣನ ಅಬ್ಬರ: ಬಸ್ ನಿಲ್ದಾಣ ಜಲಾವೃತ

ಹಾಸನ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಅರಸೀಕೆರೆ ನಗರ ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿದಂತಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ, ಅರಸೀಕೆರೆ ಬಸ್ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. ನಿಲ್ದಾಣದ ಒಳಗೆ ಮೊಣಕಾಲು ಎತ್ತರದಷ್ಟು ಮಳೆ ನೀರು…

ಭಕ್ತರೊಂದಿಗೆ ಸರದಿ ಸಾಲಿನಲ್ಲಿ ಬಂದು ಸರಳತೆ ಮೆರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಹಾಸನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸಾವಿರ ರೂ. ಟಿಕೆಟ್‌ ಖರೀದಿಸಿ ಭಕ್ತರೊಂದಿಗೆ ಸರದಿ ಸಾಲಿನಲ್ಲಿ ಬಂದು ದೇವಿ ದರ್ಶನ ಪಡೆದರು. ರಾತ್ರಿ 8 ಗಂಟೆಗೆ ನಗರಕ್ಕೆ ಆಗಮಿಸಿದ ಅವರು ಕುಟುಂಬಸ್ಥರು ಹಾಗೂ ಆಪ್ತ ಸಹಾಯಕರಿಗೆ ಸಾವಿರ…

ಶಕ್ತಿ ಯೋಜನೆ ಜಾರಿಗೊಳಿಸಿದ್ದು ಸಾರ್ಥಕವಾಗಿದೆ: ಲಕ್ಷ್ಮಿ ಹೆಬ್ಬಾಳ್ಕರ್

ಹಾಸನ: ಶಕ್ತಿ ಯೋಜನೆಯಿಂದ ರಾಜ್ಯದ ವಿವಿಧ ಮೂಲೆಗಳಿಂದ ಹಾಸನಾಂಬ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೊಳಿಸಿದ್ದು ಸಾರ್ಥಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. ಗುರುವಾರ ಸರದಿ ಸಾಲಿನಲ್ಲಿ…

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ವಿಪರೀತ: ಸಿದ್ದೇಶ್ವರ ಸ್ವಾಮಿ ದರ್ಶನ ಬಂದ್

ಹಾಸನ: ಅಧಿದೇವತೆ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ವಿಪರೀತ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವುದರಿಂದ ತಾತ್ಕಾಲಿಕವಾಗಿ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಅವಕಾಶ ಸ್ಥಗಿತಗೊಳಿಸಲಾಗಿದೆ. ಕಳೆದ ಶುಕ್ರವಾರದಿಂದ ಜಾತ್ರಾ ಮಹೋತ್ಸವ ಶುರುವಾಗಿದೆ. ಈ ವರೆಗೆ ಅಂದಾಜು 8 ಲಕ್ಷ ಭಕ್ತರು ಭೇಟಿ ನೀಡಿದ್ದಾರೆ.…

ಅಹಿಂದ ಮುಖಂಡ ಹೆಚ್.ಬಿ. ಮಲ್ಲೇಶಗೌಡ ನಿಧನ

ಸಕಲೇಶಪುರ: ಕಾರು ಚಾಲಕರ ಮಾಲೀಕರ ಸಂಘದ ಮಾಜಿ ಅಧ್ಯಕ್ಷ, ಅಹಿಂದ ಮುಖಂಡ, ಹಿರಿಯ ಪತ್ರಕರ್ತ ಹೆಚ್.ಬಿ. ಮದನ್ ಗೌಡ ಅವರ ಸಹೋದರ ಹೆಚ್.ಬಿ. ಮಲ್ಲೇಶ್ ಗೌಡ ಅನಾರೋಗ್ಯದಿಂದ ನಿಧನರಾದರು. ಹೆತ್ತೂರು ಮೂಲದ ಹೆಚ್.ಬಿ. ಮಲ್ಲೇಶ್ ಗೌಡ (70) ಅವರು ಸಣ್ಣ ವಯಸ್ಸಿನಲ್ಲೇ…

ಹಾಸನಾಂಬ ದರ್ಶನಕ್ಕಿಂದು ಡಿಸಿಎಂ, ನಾಳೆ ಸಿಎಂ ಆಗಮನ

ಹಾಸನ: ಶಕ್ತಿ ದೇವತೆ ಹಾಸನಾಂಬ ದರ್ಶನಕ್ಕೆ ಗಣ್ಯರ ದಂಡು ಹರಿದು ಬರುತ್ತಿದ್ದು ಇವತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ರಸ್ತೆ ಮಾರ್ಗವಾಗಿ ಬರಲಿರುವ ಡಿ.ಕೆ. ಶಿವಕುಮಾರ್ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ದರ್ಶನ…

ಬೆಳ್ಳಂ ಬೆಳಿಗ್ಗೆ ಎಫ್ ಡಿಎ ಮನೆ ಕದ ತಟ್ಟಿದ ಲೋಕಾಯುಕ್ತ ಪೊಲೀಸರು

ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದಡಿ ಆರೋಗ್ಯ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಫ್ ಡಿಎ ಜ್ಯೋತಿ ಮೇರಿ ಅವರ ಮನೆ ಹಾಗೂ ಅವರ ತಂಗಿಯ ನಿವಾಸದ ಮೇಲೆ…